Site icon Suddi Belthangady

ಉಜಿರೆ: ರುಡ್ ಸೆಟ್ ಇಲೆಕ್ಟ್ರಿಕಲ್ ತರಬೇತಿ ಸಮಾರೋಪ-ಉದ್ಯಮದಲ್ಲಿ ವರ್ತನೆ, ಕುತೂಹಲ, ಶಿಸ್ತು, ಬದ್ಧತೆ ಮುಖ್ಯ: ವಿಶ್ವೇಶ್ವರ ಪ್ರಸಾದ್

ಉಜಿರೆ : ಜೀವನ ಅನ್ನುವಂತಹದ್ದು ಬಹಳ ದೀರ್ಘವಾಗಿವಂತಹದ್ದು ಹೇಳಿ ನಾವು ಯಾವತ್ತೂ ಈ ಭೂಮಿ ಮೇಲೆ ಜನ್ಮ ಪಡೆಯುತ್ತೇವೆ. ಅಥವಾ ಮರಣ ಹೊಂದುತ್ತೇವೆ ಎಂದು ಎರಡು ಸಹ ನಮಗೆ ಗೊತ್ತಿರುವುದಿಲ್ಲ. ಅರ್ಜಿ ಹಾಕಿ ಬರುವಂತದಲ್ಲ, ಅರ್ಜಿ ಹೋಗುವಂತದ್ದಲ್ಲ ಆದರೆ ಈ ಜೀವನಕ್ಕೆ ಬಂದ ಮೇಲೆ ನಾವು ಏನು ಮಾಡಬೇಕು ಅಥವಾ ಏನು ಮಾಡಲು ಬಾರದು ಅನ್ನವಂತಹದ್ದು ತಿಳಿಯಬೇಕು. ಎಲ್ಲರನ್ನೂ ನೆನಪು ಇಟ್ಟುಕೊಳ್ಳುವುದಿಲ್ಲ, ಕೆಲವು ಸಾಧಕರನ್ನು ಮಾತ್ರ ನೆನಪಿಸಿಕೊಳ್ಳುತ್ತಾರೆ.

ಇವತ್ತಿನ ಬದಲಾದ ಜೀವನ ಶೈಲಿಯಲ್ಲಿ ಬೇರೆ ಎಲ್ಲ ವೃತ್ತಿಕ್ಕಿಂತ ಸ್ವಂತ ಉದ್ಯಮ ಮಾಡುವುದೇ ಸೂಕ್ತ ಎಂದು ಭಾವಿಸುತ್ತದೆ. ಜಗತ್ತಿ ಅತ್ಯಂತ ಶ್ರೀಮಂತ ವ್ಯಕ್ತಿಗಳು ಪಟ್ಟಿಯಲ್ಲಿ ಶೇಕಾಡ 83 ಜನ ಸ್ವಂತ ಉದ್ಯಮಿಗಳು ಇದ್ದಾರೆ.

ಹಾಗಾಗಿ ಈ ಉದ್ಯಮ ನಡೆಸಲು ನಿಮ್ಮ ವರ್ತನೆಯ ಮೇಲೆ ಹೆಚ್ಚಿನ ಗಮನ ಇರಿಸಬೇಕು. ನಿಮ್ಮಲ್ಲಿ ಉತ್ತಮ ಮನೋಭಾವ ಇದ್ದರೆ ಸಾಧನೆ ಸುಲಭ ಸಾಧ್ಯ. ವೃತ್ತಿಯಲ್ಲಿ ನಿರಂತರ ಕಲಿಕೆ ಇರುಬೇಕು ಅದಕ್ಕೆ ಕುತೂಹಲ ಇರಬೇಕು.

ವೃತ್ತಿಯಲ್ಲಿ ಸ್ವಯಂ ಶಿಸ್ತು ಅಳವಡಿಸಿಕೊಳ್ಳಬೇಕು ಹಾಗೂ ವ್ಯವಹಾರದಲ್ಲಿ ಬದ್ಧತೆ ಇಟ್ಟುಕೊಂಡು ಮುಂದುವರೆಯಬೇಕು. ಉದ್ಯಮದಲ್ಲಿ ಕೆಲವೊಂದು ಸಲ ಸಮಸ್ಯೆಗಳು ಬರುತ್ತೇವೆ. ನಿಮ್ಮ ಕೆಲಸ ಜನರ ಸಮಸ್ಯೆಗಳಿಗೆ ಸ್ವಂದಿಸಿ ಉತ್ತಮ ಸೇವೆಯನ್ನು ಕೊಡಿ ಎಂದು ವೇಣೂರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ), ಪ್ರಾಶುಂಪಾಲ ವಿಶ್ವೇಶ್ವರ ಪ್ರಸಾದ್ ಅಭಿಪ್ರಾಯಪಟ್ಟರು.

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ 30 ದಿನಗಳ ಕಾಲ ನಡೆದ ಇಲೆಕ್ಟ್ರಿಕಲ್‌ ಮೋಟಾರು ರಿವೈಂಡಿಂಗ್‌ ಮತ್ತು ಪಂಪ್‌ ಸೆಟ್‌ ರಿಪೇರಿ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಪ್ರಮಾಣ ಪತ್ರ ವಿತ್ತರಿಸಿ ಮಾತನಾಡಿದರು. ಮೌಲ್ಯ ಮತ್ತು ಕೌಶಲ್ಯವನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರುಡ್ ಸೆಟ್ ಸಂಸ್ಥೆಯ ನಿರ್ದೇಶಕ ಅಜೇಯ ವಹಿಸಿ, ಮಾತನಾಡಿದರು ಸರಕಾರ ಮತ್ತು ಬ್ಯಾಂಕಿನ ಹೊಸ ಯೋಜನೆಯ ಮೂಲಕ ಸಹಾಯಧನ, ಸಾಲ ಪಡೆದುಕೊಂಡು ಉದ್ಯಮ ಆರಂಭಿಸಿ, ಏನಾದರೂ ಮಾಹಿತಿ-ಮಾರ್ಗದರ್ಶನ ಬೇಕಾದರೆ ಸಂಸ್ಥೆಯನ್ನು ಸಂಪರ್ಕಿಸಿ ಎಂದು ಶುಭ ಕೋರಿದರು.

ಅತಿಥಿಗಳನ್ನು ರುಡ್ ಸೆಟ್ ಸಂಸ್ಥೆಯ ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್ ಸ್ವಾಗತಿಸಿದರು. ತೇಜಸ್ಸು ಪ್ರಾರ್ಥನೆ ಮಾಡಿದರು. ಆನಂದ, ರೋಹಿತ್, ಸಂಗಮೇಶ್ ತರಬೇತಿಯ ಅನುಭವ ಹಂಚಿಕೊಂಡರು. ಸಂಸ್ಥೆಯ ಉಪನ್ಯಾಸಕ ಕೆ.ಕರುಣಾಕರ ಜೈನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Exit mobile version