ಮುಂಡೂರು: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಮೆಸ್ಕಾಂ ನಿಗಮದ ಅಧ್ಯಕ್ಷ ಕೆ ಹರೀಶ್ ಕುಮಾರ್ ಭೇಟಿ ನೀಡಿ ಶ್ರೀದೇವರ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದರು.
ಕೆ. ಹರೀಶ್ ಕುಮಾರ್ ರವರಿಗೆ ದೇವಸ್ಥಾನದ ವ್ಯವಸ್ಥಾಪನ ಸಮಿತಿಯಿಂದ ಗೌರವ ಪೂರ್ವಕ ಅಭಿನಂದನೆ ಸಲ್ಲಿಸಲಾಯಿತು .
ಸಮಿತಿಯ ಅಧ್ಯಕ್ಷ ರಮಾನಂದ ಸಾಲಿಯಾನ್, ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಾಜೀವ್ ಸಾಲಿಯನ್, ಪ್ರಧಾನ ಅರ್ಚಕ ಅರವಿಂದ ಭಟ್, ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಚಾಮರಾಜ ಸೇಮಿತ, ನಮಿತಾ ಹರೀಶ್ ಕುಮಾರ್, ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ರಾಘವೇಂದ್ರ ಭಟ್, ಶ್ರೀ ಶಾರದಾಂಬ ಭಜನಾ ಮಂಡಳಿಯ ಅಧ್ಯಕ್ಷ ಶ್ರೀಧರ ಅಂಚನ್, ಕಾರ್ಯದರ್ಶಿ ಕೇಶವ ಕುಲಾಲ್ ವ್ಯವಸ್ಥಾಪನ ಸಮಿತಿಯ ಸದಸ್ಯ ಹರಿಶ್ಚಂದ್ರ ಹೆಗ್ಡೆ, ಅಶೋಕ್ ಕುಮಾರ್ ಕೊಡಕಾಲು, ರಮೇಶ ದೇವಾಡಿಗ ಹಾಗೂ ಅಭಿಲಾಶ್ ಭಟ್, ಜಯಾನಂದ ಬಂಗೇರ ಪರ ನೀರು, ಸುರೇಶ್ ಸಾಲಿಯಾನ್ ಪರಂಬುಡೆ , ಪ್ರವೀಣ್ ಮಡಿವಾಳ, ದಿನೇಶ್ ದೇವಾಡಿಗ, ರವಿ ಪೂಜಾರಿ ಅರುವದಕಲ, ಮೇಲಂತಬೆಟ್ಟು ಗ್ರಾಮ ಪಂಚಾಯತ್ ಸದಸ್ಯೆ ದೀಪಿಕಾ ಹಾಗೂ ಮುಂತಾದವರು ಉಪಸ್ಥಿತರಿದ್ದರು.