Site icon Suddi Belthangady

ಗೇರುಕಟ್ಟೆ: ಪತಂಜಲಿ ಯೋಗಶಾಖೆಯಲ್ಲಿ ದೀಪಾವಳಿ ಆಚರಣೆ

ಬೆಳ್ತಂಗಡಿ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ ಕೇಂದ್ರ ಕಛೇರಿ ತುಮಕೂರು ಇದರ ಕ್ಷೀರ ಸಂಗಮ ಸಬಾಭವನ ಕಳಿಯ- ಗೇರುಕಟ್ಟೆ ಯೋಗ ತರಬೇತಿ ಕೇಂದ್ರದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಶ್ರೀ ಲಕ್ಷ್ಮೀ ಪೂಜೆಯನ್ನು ನೆರವೇರಿಸಲಾಯಿತು.

ನಿತ್ಯ ಯೋಗ ತರಗತಿಯನ್ನು ಸಂಚಾಲಕ ವಿಜಯ್ ನಿರ್ವಹಿಸಿದರು. ಯೋಗಬಂಧು ದಿವಾಕರ ಆಚಾರ್ಯ ಗೇರುಕಟ್ಟೆ ದೀಪಾವಳಿ ನೀರು ತುಂಬುವ ಹಬ್ಬ, ನರಕ ಚತುರ್ದಶಿ, ಧನಲಕ್ಷ್ಮೀ ಪೂಜೆ ಬಗ್ಗೆ ಬೌದ್ಧಿಕ್ ನೀಡಿದರು. ಕೇಂದ್ರದ ಸಹ ಶಿಕ್ಷಕ ಸುಕೇಶ್, ಅಶೋಕ, ವಸಂತ, ವರದಿ ಪ್ರಮುಖ ಕೇಶವ, ಅರುಣಾ, ಭಾರತಿ, ಪದ್ಮಲತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಂಗೋಲಿ, ಹಣತೆಗಳ ಸಾಲು ಮತ್ತು ಅಮೃತ ಫಲಾಹಾರದ ಜೋಡಣೆಗೆ ಯೋಗಬಂಧುಗಳು ಸಹಕರಿಸಿದರು.

Exit mobile version