ಉಜಿರೆ: ಕರ್ನಾಟಕ ರಾಜ್ಯದ ಮಾದರಿ ಗ್ರಾಮ ಪಂಚಾಯತಿಯಾದ ಉಜಿರೆ ಗ್ರಾಮ ಪಂಚಾಯತಿಯಲ್ಲಿ ಸ್ವಚ್ಛ ಭಾರತ ಮಿಷನ್ (ಗ್ರಾಮೀಣ) ಯೋಜನೆಯ ಅನುಷ್ಠಾನದ ಕುರಿತಂತೆ ಅಧ್ಯಯನ ಪ್ರವಾಸವನ್ನು ನಡೆಸಲು ಆಂಧ್ರ ಪ್ರದೇಶ ರಾಜ್ಯ ಸರ್ಕಾರದ ಸ್ವಚ್ಛ ಆಂಧ್ರ ಕಾರ್ಪೊರೇಷನ್ ಸಮಿತಿಯ ಅಧ್ಯಕ್ಷ ಕೋಮರೆಡ್ಡಿ ಪಟ್ಟಾಭಿರಾಮ ಹಾಗೂ ಸಮಿತಿಯ ಸದಸ್ಯರು ಭೇಟಿ ನೀಡಿದರು. ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ಕಿರಣ್ ಕಾರಂತ್ ಹೂಗುಚ್ಛ ನೀಡಿ ಗ್ರಾಮ ಪಂಚಾಯಿತಿಗೆ ಸ್ವಾಗತಿಸಿದರು.
ಅಧ್ಯಯನ ಪ್ರವಾಸದ ತಂಡವು ಉಜಿರೆ ಗ್ರಾಮ ಪಂಚಾಯತ್ ಕಚೇರಿ, ಡಿಜಿಟಲ್ ಅರಿವು ಕೇಂದ್ರ, ಎಂ.ಆರ್.ಎಫ್ ಘಟಕ, ಸ್ವಚ್ಛ ಸಂಕೀರ್ಣ ಘಟಕ, ಮಲ ತ್ಯಾಜ್ಯ ನಿರ್ವಹಣಾ ಘಟಕವನ್ನು ಭೇಟಿ ನೀಡಿ ಅಧ್ಯಯನ ನಡೆಸಿದರು.
ಬೆಳ್ತಂಗಡಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿ ಕಾರಿ ಭವಾನಿಶಂಕರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು, ಸ್ವಚ್ಛ ಭಾರತ ಮಿಷನ್ (ಗ್ರಾ) ಜಿಲ್ಲಾ ಘಟಕದ ಸಂಯೋಜಕರಾದ ಪವನ್, ನವೀನ್ ಹಾಗೂ ಡೊಂಬಯ್ಯ ಅವರು, ಉಜಿರೆ ಗ್ರಾಮ ಪಂಚಾಯತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ, ಕಾರ್ಯದರ್ಶಿ, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು