Site icon Suddi Belthangady

ಜೆಸಿಐ ಕೊಕ್ಕಡ ಕಪಿಲಾ ಘಟಕಕ್ಕೆ ವಲಯ ಸಮ್ಮೇಳನದಲ್ಲಿ ಪ್ರಶಸ್ತಿಗಳ ಸುರಿಮಳೆ

ಕೊಕ್ಕಡ: ಜೆಸಿಐ ಇಂಡಿಯಾ ವಲಯ 15ರ ವತಿಯಿಂದ ಮಂಗಳೂರಿನ ಸ್ವಸ್ತಿಕ್ ವಾಟರ್‌ಫ್ರಂಟ್‌ನಲ್ಲಿ ಅಕ್ಟೋಬರ್ 18 ಮತ್ತು 19ರಂದು ಆಯೋಜಿಸಲಾದ ವಲಯ ಸಮ್ಮೇಳನದಲ್ಲಿ ಜೆಸಿಐ ಕೊಕ್ಕಡ ಕಪಿಲಾ ಘಟಕವು ಅತ್ಯುತ್ತಮ ಸೇವಾ ಕಾರ್ಯಚಟುವಟಿಕೆಗಳಿಂದ ಮೆಚ್ಚುಗೆ ಪಡೆಯುವಲ್ಲಿ ಯಶಸ್ವಿಯಾಗಿದೆ.

ಡಾ. ಶೋಭಾ ಪಿ ಅವರ ನೇತೃತ್ವದಲ್ಲಿ ನಡೆದಿರುವಂತಹ ಈ ವರ್ಷದ ಕಾರ್ಯಕ್ರಮ ದಲ್ಲಿ ಜೆ ಸಿ ಐ ಕೊಕ್ಕಡ ಕಪಿಲ ಘಟಕವು ಸಮ್ಮೇಳನದಲ್ಲಿ ಹಲವಾರು ಪ್ರಶಸ್ತಿ, ಪುರಸ್ಕಾರ ಮತ್ತು ಮನ್ನಣೆಗಳನ್ನು ಪಡೆದು ತನ್ನ ಶ್ರೇಷ್ಠತೆ ಸಾಬೀತುಪಡಿಸಿದೆ. ಘಟಕದ ನೇತೃತ್ವದಡಿಯಲ್ಲಿ ಈ ವರ್ಷ ನಡೆದ ವಿವಿಧ ಸಮಾಜಮುಖಿ ಯೋಜನೆಗಳು, ಯುವಶಕ್ತಿ ಅಭಿವೃದ್ಧಿ ಕಾರ್ಯಕ್ರಮಗಳು, ಪರಿಸರ ಸಂರಕ್ಷಣಾ ಚಟುವಟಿಕೆಗಳು ಹಾಗೂ ಸಮುದಾಯ ಸೇವೆಗಳು ವಲಯ ಮಟ್ಟದಲ್ಲಿ ಗಮನಸೆಳೆದವು.

ಸಮ್ಮೇಳನದ ವಿಶೇಷತೆಯೆಂದರೆ, ಜೆಸಿಐ ಕೊಕ್ಕಡ ಕಪಿಲಾ ಘಟಕದ ಪೂರ್ವಧ್ಯಕ್ಷರಾದ ಜೆಸಿಐ ಜಿತೇಶ್ ಎಲ್. ಪಿರೇರ ಅವರು ಜೆಸಿಐ ಇಂಡಿಯಾ ವಲಯ 15ರ ವಲಯ ಉಪಾಧ್ಯಕ್ಷರಾಗಿ ಅಧಿಕೃತವಾಗಿ ಆಯ್ಕೆಯಾಗಿದ್ದಾರೆ. ಈ ಗೌರವಪೂರ್ಣ ಸ್ಥಾನಕ್ಕೆ ಅವರು ಆಯ್ಕೆಯಾಗಿರುವುದು ಘಟಕದ ಹೆಮ್ಮೆ.

ಈ ಸಾಧನೆಗಳು ಘಟಕದ ಎಲ್ಲಾ ಪದಾಧಿಕಾರಿಗಳ, ಮಾರ್ಗದರ್ಶಕರ, ಪೂರ್ವಧ್ಯಕ್ಷರ, ಉಪಾಧ್ಯಕ್ಷರ ಮತ್ತು ಎಲ್ಲಾ ಸದಸ್ಯರ ಬದ್ಧತೆ, ಶ್ರಮ ಹಾಗೂ ಸೇವಾಭಾವನೆಯ ಫಲವಾಗಿದೆ.ಎಂದು ಕೊಕ್ಕಡ ಕಪಿಲಾ ಘಟಕದ ಅಧ್ಯಕೆ ಡಾ. ಶೋಭಾ ಪಿ ಸುದ್ದಿ ನ್ಯೂಸ್ ಗೆ ತಿಳಿಸಿದ್ದಾರೆ.ಈ ಸಂಧರ್ಭದಲ್ಲಿ
ಘಟಕದ ಎಲ್ಲ ಸದಸ್ಯರು ಉಪಸ್ಥಿತರಿದ್ದು ಜಿತೇಶ್ ಎಲ್. ಪಿರೇರರಿಗೆ ಶುಭಾಶಯ ತಿಳಿಸಿದರು.

Exit mobile version