Site icon Suddi Belthangady

ಶಿಶಿಲ: ಶ್ರೀ ಕ್ಷೇತ್ರ ಚಂದ್ರಪುರ ಜಿನಮಂದಿರದಲ್ಲಿ ಭಗವಾನ್ ವರ್ಧಮಾನ ಸ್ವಾಮಿಯ ಮೋಕ್ಷ ಕಲ್ಯಾಣೋತ್ಸವ

ಶಿಶಿಲ: ಶ್ರೀ ಕ್ಷೇತ್ರ ಚಂದ್ರಪುರ ಜಿನಮಂದಿರದಲ್ಲಿ ಭಗವಾನ್ ವರ್ಧಮಾನ ಸ್ವಾಮಿಯ ಮೋಕ್ಷ ಕಲ್ಯಾಣೋತ್ಸವ ಅ.21ರಂದು ಭಗವಾನ್ 1008 ಶ್ರೀ ವರ್ಧಮಾನ ಮಹಾವೀರ ಸ್ವಾಮಿಯ ಜನ್ಮ ಕಲ್ಯಾಣೋತ್ಸವವು ಶ್ರೀ ಕ್ಷೇತ್ರ ಚಂದ್ರಪುರ ಶಿಶಿಲದ ಭಗವಾನ್ 1008 ಶ್ರೀ ಚಂದ್ರನಾಥ ಸ್ವಾಮಿ ಸನ್ನಿಧಿಯಲ್ಲಿ ಮುಂಜಾನೆ 5:00 ಗಂಟೆಯಿಂದ ವಿಜ್ರಮಣೆಯಿಂದ ಜರಗಿತು.

ಭಗವಾನ್ ತೀರ್ಥಂಕರರಿಗೆ ಹಾಲು, ಗಂಧ ಸಿಯಾಳ ಚಂದನ ಮುಂತಾದ ದೃವ್ಯಗಳಿಂದ ಅಭಿಷೇಕಗಳನ್ನು ಮಾಡಿ ಮಹಾಮತೆ ಶ್ರೀ ಪದ್ಮಾವತಿ ಅಮ್ಮನವರಿಗೆ ವಿಶೇಷ ಪೂಜೆಗಳನ್ನು ನೆರವೇರಿಸಿ ಸಾಮೂಹಿಕ ಆರತಿ ಬೆಳಗುದರೊಂದಿಗೆ ಜಿನ ಭಜನೆಯೊಂದಿಗೆ ಪೂಜಾ ಮಹೋತ್ಸವ ನಡೆಯಿತು.

ವಿದ್ಯುತ್ ಚಾಲಿತ ಬ್ಯಾಂಡ್ ಸೆಟ್ ನ್ನು ಶ್ರೇಯ ವಿಶಾಲ್ ಹೆಗಡೆ ಕಾಯರ್ತಡ್ಕ ಅವರು ದಾನ ನೀಡಿದರು. ಎಲ್ಲರ ಸಹಕಾರದಿಂದ ದೋಸೆ ಹಬ್ಬವನ್ನು ಆಚರಿಸಲಾಯಿತು. ಅತಿ ಹೆಚ್ಚು ಸಂಖ್ಯೆಯಲ್ಲಿ ಶ್ರಾವಕ ಶ್ರಾವಕಿಯರು ಭಾಗವಹಿಸಿದ್ದು ಡಾ. ಕೆ. ಜಯಕೀರ್ತಿ ಜೈನ್, ಹೆಚ್ .ವಿಜಯಕುಮರ್, ಫಣಿರಾಜ್.ಜೈನ್, ಯುವರಾಜ್ ಜೈನ್, ಸಂತೋಷ್ ಜೈನ್, ಅತಿಶಯ ಜೈನ್, ವಿಜೇಶ್ ಜೈನ್, ಭುವನ್ ಜೈನ್, ಪ್ರೀತಮ್ ಜೈನ್ ಹಾಗೂ ರಾಣಿ ಶ್ರೀ ಕಾಳಾಲಾ ದೇವಿ ಜೈನ ಮಹಿಳಾ ಸಮಾಜದ ಸದಸ್ಯರು ಕಾರ್ಯಕ್ರಮದಲ್ಲಿ ಸಹಕರಿಸಿದರು.

Exit mobile version