Site icon Suddi Belthangady

ನ.24: ಬೆಂಗಳೂರು ಪ್ರಿಯದರ್ಶಿನಿ ಗ್ರಾಮೀಣ ಅಭಿವೃಧಿ ಫೌಂಡೇಶನ್‌ & ಸಂಸ್ಥೆಯಿಂದ ಡಾ. ಗೋಪಾಲಕೃಷ್ಣ ಕಾಂಚೋಡು ಅವರಿಗೆ ‘ಹೆಮ್ಮೆಯ ಕನ್ನಡಿಗ’ ರಾಷ್ಟ್ರ ಪ್ರಶಸ್ತಿ

ಬೆಳ್ತಂಗಡಿ: ಡಾ. ಗೋಪಾಲಕೃಷ್ಣ ಕಾಂಚೋಡು ಅವರಿಗೆ ಹೆಮ್ಮೆಯ ಕನ್ನಡಿಗ ರಾಷ್ಟ್ರ ಪ್ರಶಸ್ತಿಬೆಳ್ತಂಗಡಿ: ಬೆಂಗಳೂರು ಪ್ರಿಯದರ್ಶಿನಿ ಗ್ರಾಮೀಣ ಅಭಿವೃಧಿ ಫೌಂಡೇಶನ್‌ & ಸಂಸ್ಥೆಯಿಂದ ಕನ್ನಡ ನಾಡು, ನುಡಿ, ನೆಲ, ಜಲ ಭಾಷೆ, ಸಂಸ್ಕೃತಿ, ಸಂಗೀತ, ಸಾಹಿತ್ಯ, ಶಿಕ್ಷಣ, ಕಲೆ ಸಮಾಜ ಸೇವೆ ಈ ಮುಂತಾದ ಕ್ಷೇತ್ರಗಳಲ್ಲಿ ನಿರಂತರವಾಗಿ ಶ್ರಮಿಸುತ್ತಿರುವ ಭಾರತೀಯ ಭೂ ಸೇನೆಯ ನಿವೃತ್ತ ಯೋಧ ಲಯನ್ ಡಾ. ಗೋಪಾಲಕೃಷ್ಣ ಕಾಂಚೋಡು ಅವರ ಪ್ರತಿಭೆ, ಸಾಧನೆಯನ್ನು ಗುರುತಿಸಿ ಕೊಡಮಾಡುವ ‘ಹೆಮ್ಮೆಯ ಕನ್ನಡಿಗ’ ರಾಷ್ಟ್ರ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ.

ನ. 24ರಂದು ಬೆಂಗಳೂರು ನಯನ ರಂಗಮಂದಿರ ರವೀಂದ್ರ ಕಲಾಕ್ಷೇತ್ರ ಆವರಣ ಜೆಸಿ ರಸ್ತೆ ಟೌನ್ ಹಾಲ್ ನಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಏರ್ಪಡಿಸಲಾಗುವ ಹೆಮ್ಮೆಯ ಕನ್ನಡಿಗ ಮತ್ತು ಕನ್ನಡತಿ ರಾಷ್ಟ್ರ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಸಾಂಸ್ಕೃತಿಕ ಉತ್ಸವ 2025 ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಸಮರ್ಪಿಸಲಾಗುತ್ತದೆ.

Exit mobile version