ಧರ್ಮಸ್ಥಳ: ಗ್ರಾಮ ನಾರ್ಯ, ಎರ್ಮುಂಜಬೈಲು ಪೊದುಂಬಿಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಗ್ರಾಮ ದೈವಗಳ ಉತ್ಸವ ಸಮಿತಿ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಮತ್ತು ಶ್ರೀ ಷಣ್ಮುಖ ಭಜನಾ ಮಂಡಳಿ ಹಾಗೂ ಊರವರ ಸಹಕಾರದೊಂದಿಗೆ ದೀಪಾವಳಿ ಹಬ್ಬದ ಪ್ರಯುಕ್ತ ಕೆಸರ್ ದ ಕಂಡಡ್ ಪರ್ಬದ ಗೊಬ್ಬು-2025 ಅ.19ರಂದು ಪೊದುಂಬಿಲ ದೇವಸ್ಥಾನದ ಬಳಿ ನಡೆಯಿತು.
ಕಾರ್ಯಕ್ರಮವನ್ನು ಪೊದುಂಬಿಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕ ಪ್ರಸಾದ್ ಪಾಂಗಣ್ಣಾಯ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಕೆಸರ್ ಕಂಡಡ್ ಪರ್ಬದ ಗೊಬ್ಬು ಆಚರಣಾ ಸಮಿತಿ ಅಧ್ಯಕ್ಷ ಕುಮಾರ್ ನೂಜಿಮಾರ್ ವಹಿಸಿದರು.
ಮುಖ್ಯ ಅತಿಥಿಯಾಗಿ ಪ್ರಗತಿಪರ ಕೃಷಿಕ ಸೂರ್ಯನಾರಾಯಣ ರಾವ್ ದೊಂಡೋಲೆ, ಸಂತೋಷ್ ಜೈನ್ ನಾರ್ಯ ಉದ್ಯಮಿ, ಪ್ರಗತಿಪರ ಕೃಷಿಕರಾದ ಚಂದ್ರ ಶೆಟ್ಟಿ ನಾರ್ಯ, ಸೂರಪ್ಪ ಪೂಜಾರಿ, ಬಿಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್, ಧರ್ಮಸ್ಥಳ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಪ್ರೀತಂ ಡಿ., ಧರ್ಮಸ್ಥಳ ಗ್ರಾ.ಪಂ. ಸದಸ್ಯೆ ರೇವತಿ, ಎರ್ಮುಂಜಬೈಲು ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಅಧ್ಯಕ್ಷ ಪ್ರಸಾದ್, ಎರ್ಮುಂಜಬೈಲು ಶ್ರೀ ಷಣ್ಮಖ ಭಜನಾ ಮಂಡಳಿ ಅಧ್ಯಕ್ಷೆ ವಿದ್ಯಾ ಸುರೇಂದ್ರ, ಸಿ.ಜಿ ಪ್ರಭಾಕರ್ ಕನ್ಯಾಡಿ II, ಪ್ರಕಾಶ್ ಗೌಡ ಅಪ್ರಮೇಯ ಉಜಿರೆ, ಕನ್ಯಾಡಿ II ಅರ್ಕ ರೆಸಾರ್ಟ್ ಕನ್ವೆಶನಲ್ ಹಾಲ್ ಮಾಲಕ ಅವಿನಾಶ್ ಶೆಟ್ಟಿ ಉಪಸ್ಥಿತರಿದ್ದರು.
ಸಂಚಾಲಕ ಸುಧಾಕರ ಗೌಡ ಧರ್ಮಸ್ಥಳ, ಅಧ್ಯಕ್ಷ ಕುಮಾರ್ ನೂಜಿಮಾರ್, ಕಾರ್ಯದರ್ಶಿ ನಿಶಾನ್ ಬಂಗೇರ ನಾರ್ಯ, ಉಪಾಧ್ಯಕ್ಷ ಮೋಹನ್ ಗೌಡ ಅರಿಕೋಡಿ, ಕ್ರೀಡಾ ಸಮಿತಿ ಸಂಚಾಲಕ ಜಯಂತ್ ಗೌಡ ಅರಿಕೋಡಿ, ಆಹಾರ ಸಮಿತಿ ಸಂಚಾಲಕ ಸೂರ್ಯಾನಂದ ರಾವ್ ಪೊದುಂಬಿಲ ಹಾಗೂ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ 1ರಿಂದ 5 ತರಗತಿಯ ಬಾಲಕ-ಬಾಲಕಿಯರಿಗೆ, 6ರಿಂದ 10ನೇ ತರಗತಿಯ ಬಾಲಕ-ಬಾಲಕಿಯರಿಗೆ, ಮಹಿಳೆಯರಿಗೆ, ಪುರುಷರಿಗೆ, ದಂಪತಿಗಳಿಗೆ, ಹಿರಿಯ ವಿಭಾಗದವರಿಗೆ ವಿವಿಧ ಸ್ಪರ್ಧೆಗಳು ನಡೆಯಿತು. ಉಜಿರೆ ಹಿಪ್ ಬಾಯ್ಸ್ ನೃತ್ಯ ತಂಡದವರಿಂದ ನೃತ್ಯ ಕಾರ್ಯಕ್ರಮ ಜರುಗಿತು.
ಸಂಜೆ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಬಹುಮಾನ ವಿತರಣಾ ನಡೆಯಿತು. ದಾಮೋದರ ದೊಂಡೋಲೆ ಹಾಗೂ ಕಿರಣ್ ದೊಂಡೋಲೆ ಕಾರ್ಯಕ್ರಮ ನಿರೂಪಿಸಿದರು.