Site icon Suddi Belthangady

ನಾವೂರು: ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಜಾತ್ರಾ ಮಹೋತ್ಸವ, ಸಮಾಲೋಚನಾ ಸಭೆ

ನಾವೂರು: ಶ್ರೀ ಗೋಪಾಲಕೃಷ್ಣ ದೇವಸ್ಥಾನ ಸೇವಾ ಟ್ರಸ್ಟ್ ವತಿಯಿಂದ 2026 ರಲ್ಲಿ ನಡೆಯಲಿರುವ 10ನೇ ವರ್ಷದ ಜಾತ್ರಾಮಹೋತ್ಸವ ಪ್ರಯುಕ್ತ ಅ.19ರಂದು ಕ್ಷೇತ್ರದ ಸಭಾಂಗಣದಲ್ಲಿ ಬೆಳ್ತಂಗಡಿ ತಾಲೂಕಿನ ವಿವಿಧ ಕ್ಷೇತ್ರದ ಗಣ್ಯರ ಉಪಸ್ಥಿತಿಯಲ್ಲಿ ಸಮಾಲೋಚನಾ ಸಭೆ ಜರಗಿತು.

ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪಸಿಂಹ ನಾಯಕ್ ಮಾತನಾಡಿ, ಶ್ರದ್ಧೆ ಮತ್ತು ಭಕ್ತಿಗೆ ಪರ್ಯಾಯಗಳಿಲ್ಲ, ಅದನ್ನು ವಿವರಿಸಲು ಸಾಧ್ಯವಿಲ್ಲ. ಸನಾತನ ಪರಂಪತರೆ ಮತ್ತಷ್ಟು ಗಟ್ಟಿಯಾಗಬೇಕು ಎಂಬ ನೆಲೆಯಲ್ಲಿ ಪ್ರತಿ ಬಾರಿ ನಾವೂರು ದೇವಸ್ಥಾನ ಹೊಸ ಸಂಸ್ಕಾರವನ್ನು ನೀಡುತ್ತಿರುವುದು ದೊಡ್ಡ ಚಿಂತನೆಯಾಗಿದೆ. ಸಾವಿರಾರು ಮಂದಿ ಸೇರಿ ಈ ಬಾರಿಯ ಜಾತ್ರೋತ್ಸವಕ್ಕೆ ವಿಷ್ಣು ಸಹಸ್ರನಾಮ ಪಠಿಸುವ ಹೊಸ ಸಂಪ್ರದಾಯಕ್ಕೆ ಮುನ್ನುಡಿ ಬರೆದಿರುವುದು ದೊಡ್ಡ ಸೇವೆ ಎಂದು ಹೇಳಿದರು.

ಜಾತ್ರೋತ್ಸವ ಮಾರ್ಗದರ್ಶಿ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಮಾತನಾಡಿ, ನಮ್ಮಲ್ಲಿ ಸಂಸ್ಕಾರ ವಿಸ್ತಾರ ಮಾಡುವ ನಾಲ್ಕು ಕೇಂದ್ರಗಳಾದ ಮನೆ, ಶಾಲೆ, ದೇವಸ್ಥಾನ, ಸಮಾಜದಲ್ಲಿ ಶಕ್ತಿಯ ಸಂವರ್ಧನೆಯಾಗಬೇಕು. ಹಾಗಾಗಿ ಮನುಷ್ಯನಾಗಬೇಕಾದರೆ ಶರೀರ, ಬುದ್ಧಿ ವಿಸ್ತಾರದ ಜತೆಗೆ ಆತ್ಮ ಶುದ್ಧಿಯಾಗಬೇಕಿದೆ. ಅದು ಭಾರತೀಯ ಸಂಸ್ಕೃತಿಯಲ್ಲಿ ಬಿಂಬಿತವಾಗಿದೆ. ಸಾಮಾಜಿಕ ಜೀವನ ಮೌಲ್ಯ ಉಳಿಸುವ ನೆಲೆಯಲ್ಲಿ ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಕಳೆದ ಹತ್ತು ವರ್ಷಗಳಿಂದ ಭಕ್ತಿಯ ಸಾಂಗತ್ಯದ ತಪಸ್ಸು ನಡೆದಿದೆ.

ಈ ಬಾರಿಯ ಜಾತ್ರೋತ್ಸವಕ್ಕೆ 2000 ಮಂದಿ ಏಕಕಾಲದಲ್ಲಿ ಸೇರಿ ಶ್ರೀ ವಿಷ್ಣುಸಹಸ್ರನಾಮ ಪಠಿಸುವ ಇಚ್ಚೆ ಹೊಂದಿರುವುದು ವಿಶೇಷ. ಇದಕ್ಕಾಗಿ ಪ್ರತಿ ಮನೆಯಿಂದ ಓರ್ವ ಭಾಗವಹಿಸಲೇಬೇಕಾಗಿದೆ. ಜತೆಗೆ ಪ್ರತಿ ಮನೆ ಮಂದಿ ಕನಿಷ್ಠ 10 ಮಂದಿಯನ್ನು ಕರೆತರುವ ಸಂಕಲ್ಪ ಹೊಂದಬೇಕು. ಇವೆಲ್ಲದರ ಸಿದ್ಧತೆ ಡಿಸೆಂಬರ್ 30 ರೊಳಗೆ ತಯಾರಿರಬೇಕು. ಜ.29 ರಂದು ಭೀಷ್ಮ ಏಕಾದಶಿಯಂದು ವಿಷ್ಣು ಸಹಸ್ರನಾಪ್ರತಿ ಮನೆಯಿಂದ ಓರ್ವ ಭಾಗವಹಿಸಬೇಕು. ಪ್ರತಿ ಮನೆಯವ ಕನಿಷ್ಠ 10 ಮಂದಿಯನ್ನು ಕರೆತರುವ ಮೂಲಕ ವಿಷ್ಣು ಸಹಸ್ರನಾಮ ಪಠಣವಾಗಬೇಕು ಎಂದು ಹೇಳಿದರು.

ಸಭೆಯಲ್ಲಿ ಅನೇಕ ಉಪ ಸಮಿತಿ ರಚಿಸುವ ಬಗ್ಗೆ, ಜಾತ್ರೋತ್ಸವ ವಿಶೇಷತೆ, ವೀಣ ಬನ್ನಂಜೆಯವರ ಕಾರ್ಯಕ್ರಮ ಸಹಿತ ವಿವಿಧ ರೀತಿಯ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳ ವಿಚಾರವಾಗಿ ಚರ್ಚಿಸಪಾಯಿತು.

ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನ ಆಡಳಿತ ಮೊಕ್ತೇಸರ ಡಾ.ಎಸ್.ಸತೀಶ್ಚಂದ್ರ, ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನ ಸೇವಾ ಟ್ರಸ್ಟ್ ಅಧ್ಯಕ್ಷ ಹರೀಶ್ ಸಾಲಿಯಾನ್ ಮೋರ್ತಾಜೆ, ಟ್ರಸ್ಟ್ ಪೂರ್ವಾಧ್ಯಕ್ಷ ಎ.ಬಿ.ಉಮೇಶ್ ಅತ್ಯಡ್ಕ, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಡಾ.ಪ್ರದೀಪ್ ನಾವೂರು, ವಾಣಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕುಶಾಲಪ್ಪ ಗೌಡ, ಬೆಳ್ತಂಗಡಿ ಪತ್ರಕರ್ತ ಸಂಘದ ಅಧ್ಯಕ್ಷ ಪ್ರಸಾದ್ ಎಣಿಂಜೆ, ಎಸ್.ಕೆ.ಡಿ.ಆರ್.ಡಿ.ಪಿ. ಯೋಜನಾಧಿಕಾರಿ ಯಶೋಧರ ಸಹಿತ ದೇವಸ್ಥಾನ ಟ್ರಸ್ಟ್ ಪದಾಧಿಕಾರಿಗಳು, ಸದಸ್ಯರು, ತಾಲೂಕಿನ ಪ್ರಮುಖ ಸಂಘ-ಸಂಸ್ಥೆ ಸದಸ್ಯರು ಉಪಸ್ಥಿತರಿದ್ದರು.

Exit mobile version