Site icon Suddi Belthangady

ಅ.26: ದುಬೈಯಲ್ಲಿ ಬಿಲ್ಲವಾಸ್ ಫ್ಯಾಮಿಲಿಯಿಂದ ಬಿಲ್ಲವ ವೈಭವ-ಬೆಳ್ತಂಗಡಿಯ ಪ್ರಜ್ಞಾ ಓಡಿಲ್ನಾಳರಿಂದ ನಿರೂಪಣೆ

ಬೆಳ್ತಂಗಡಿ: ದುಬೈ ಬಿಲ್ಲವಾಸ್ ಫ್ಯಾಮಿಲಿ ವತಿಯಿಂದ ಬಿಲ್ಲವ ವೈಭವ ಕಾರ್ಯಕ್ರಮ ಅ. 26ರಂದು ಬೆಳಿಗ್ಗೆ 9.30ರಿಂದ 5.30ರವರೆಗೆ ದುಬೈನ ಶೇಕ್ ಝಾಯಿದ್ ರಸ್ತೆಯಲ್ಲಿರುವ ಡೌನ್ ಟೌನ್ ಹೋಟೆಲ್ ನ ಮಿಲೇನಿಯಂ ಪ್ಲಾಝಾದಲ್ಲಿ ನಡೆಯಲಿದೆ .
ಈ ಕಾರ್ಯಕ್ರಮದಲ್ಲಿ ಬೆಳ್ತಂಗಡಿಯ ಪ್ರಜ್ಞಾ ಓಡಿಲ್ನಾಳ ಕಾರ್ಯಕ್ರಮ ನಿರೂಪಿಸಲಿದ್ದಾರೆ.

ನೃತ್ಯ, ಸಂಗೀತ ಮನೋರಂಜನೆ ಸಹಿತ ವಿಭಿನ್ನ ರೀತಿಯ ಕಾರ್ಯಕ್ರಮ ನಡೆಯಲಿದೆ. ತನ್ನ ಉತ್ತಮ ನಿರೂಪಣೆ ಮೂಲಕ ಜನಮನ ಗೆದ್ದಿರುವ ಪ್ರಜ್ಞಾ ಓಡಿಲ್ನಾಳ ಇದೀಗ ವಿದೇಶದಲ್ಲಿಯೂ ತನ್ನ ಛಾಪು ಮೂಡಿಸಲಿದ್ದಾರೆ.

Exit mobile version