Site icon Suddi Belthangady

ಬೆಳ್ತಂಗಡಿ: ಕೊಯ್ಯೂರು, ಗೇರುಕಟ್ಟೆ, ಹುಣ್ಸೆಕಟ್ಟೆ ಸರ್ಕಾರಿ ಬಸ್ ಸಂಚಾರ ಪ್ರಾರಂಭ-ಗ್ರಾಮಸ್ಥರಿಂದ ರಕ್ಷಿತ್ ಶಿವರಾಮ್ ಗೆ ಅಭಿನಂದನೆ

ಬೆಳ್ತಂಗಡಿ: ಕೊಯ್ಯೂರು, ಪರಪ್ಪು, ಗೇರುಕಟ್ಟೆ, ಹುಣ್ಸೆಕಟ್ಟೆ ಮೂಲಕ ಸರ್ಕಾರಿ ಬಸ್ ಸಂಚಾರ ಪ್ರಾರಂಭವಾಗಿದೆ. ಕೆಲ ತಿಂಗಳ ಹಿಂದೆ ಕೊಯ್ಯೂರು ಕಳಿಯ ಗ್ರಾಮಸ್ಥರು ಈ ರೂಟ್ ಗೆ ಸರ್ಕಾರಿ ಬಸ್ ಸಂಚಾರ ಪ್ರಾರಂಭಿಸಬೇಕೆಂದು ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಗೆ ಮನವಿ ಸಲ್ಲಿಸಿದ್ದರು.

ರಕ್ಷಿತ್ ಶಿವರಾಮ್ ಕೂಡಲೇ ಅಧಿಕಾರಿಗಳನ್ನು ಸಂಪರ್ಕಿಸಿ ಬಸ್ ಸೌಲಭ್ಯವನ್ನು ದೊರಕಿಸಿಕೊಟ್ಟರು. ಕಳಿಯ ಕೊಯ್ಯೂರು ಗ್ರಾಮಸ್ಥರು ಅ.19ರಂದು ರಕ್ಷಿತ್ ಶಿವರಾಮ್ ಭೇಟಿ ಮಾಡಿ ಅಭಿನಂದನೆಯನ್ನು ಸಲ್ಲಿಸಿದರು.

ಗ್ರಾಮಸ್ಥರಾದ ಪ್ರವೀಣ್ ಗೌಡ, ಲೋಕೇಶ್ ಗೌಡ, ಯೂಸುಫ್ ಮಜ್ಜಿಮಾರು, ಹಮೀದ್ ಜಿ.ಡಿ., ಸಲೀಮ್ ಕೊಯ್ಯೂರು, ಪವನ್ ಗೌಡ, ಇರ್ಫಾನ್, ಭರತ್ ಗೌಡ ಹಾಜರಿದ್ದರು.

Exit mobile version