Site icon Suddi Belthangady

ಗುರುವಾಯನಕೆರೆ: ಮಹಾಧ್ಯುತ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ಹಿಂದೂ ಟ್ರೋಫಿ-2025- ಕ್ರೀಡಾಕೂಟಗಳು ಯುವ ಜನತೆಗೆ ಸ್ಪೂರ್ತಿ: ಸುಕೇಶ್ ಕುಮಾರ್ ಕಡಂಬು

ಬೆಳ್ತಂಗಡಿ: ಗುರುವಾಯನಕೆರೆ ಮಹಾಧ್ಯುತ ಫ್ರೆಂಡ್ಸ್ ಸರ್ಕಲ್ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ 11 ಜನರ ಹಿಂದೂ ಬಾಂಧವರ ಫುಲ್ ಗ್ರೌಂಡ್ ಮಾದರಿಯ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಹಿಂದೂ ಟ್ರೋಫಿ 2025 ಕ್ರೀಡಾಕೂಟಕ್ಕೆ ಅ.19ರಂದು ಅ.19ರಂದು ಜೂನಿಯರ್ ಕಾಲೇಜು ಮೈದಾನದಲ್ಲಿ ಚಾಲನೆ ನೀಡಲಾಯಿತು.

ಶ್ರೀ ಕೊಡಮಣಿತ್ತಾಯ ದೈವಸ್ಥಾನ ಅರಮಲೆಬೆಟ್ಟದ ಆಡಳಿತ ಮೊಕ್ತೇಸರ ಸುಕೇಶ್ ಕುಮಾರ್ ಕಡಂಬು ಅವರು ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ ಕ್ರೀಡಾಕೂಟಗಳು ಯುವಜನತೆಗೆ ಸ್ಪೂರ್ತಿಯಾಗಿದೆ. ಯುವ ತರುಣರು ಈ ರೀತಿಯ ಕ್ರೀಡೆ, ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಮಾಜಕ್ಕೆ ಕೊಡುಗೆ ನೀಡುವಲ್ಲಿ ಪಾತ್ರ ವಹಿಸಬೇಕು ಎಂದು ಶುಭ ಹಾರೈಸಿದರು.

ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಶೆಟ್ಟಿ ಮಾತನಾಡಿ ಹಿಂದೂ ಧರ್ಮದಲ್ಲಿ ಒಗ್ಗಟ್ಟು ಹೆಚ್ಚಾಗಲು ಈ ರೀತಿಯ ಹಿಂದೂ ಭಾಂದವರ ಕ್ರೀಡಾಕೂಟ ಅತ್ಯಗತ್ಯ ಎಂದು ಹೇಳಿ ಶುಭ ಹಾರೈಸಿದರು.

ಗುರುವಾಯನಕೆರೆಯ ಓಮ್ ಎಲೆಕ್ಟ್ರಿಕಲ್ಸ್ ಮಾಲಕ ಪ್ರದೀಪ್ ಕುಮಾರ್ ಶೆಟ್ಟಿ, ಗುರುವಾಯನಕೆರೆಯ ಶ್ರೀ ಸಾಯಿ ಮೆಡಿಕಲ್ ಮಾಲಕ ಸುದೀಪ್, ಪಟ್ಟಣ ಪಂಚಾಯತ್ ಮೇಲ್ವಿಚಾರಕ ಕರುಣಾಕರ ಬಂಗೇರ, ಮಹಾಧ್ಯುತ ಫ್ರೆಂಡ್ಸ್ ಸರ್ಕಲ್ ತಂಡದ ಪದಾಧಿಕಾರಿಗಳು, ಆಟಗಾರರು ಉಪಸ್ಥಿತರಿದ್ದರು.

ಪ್ರಮ್ಯ ಆಚಾರ್ಯ ಪ್ರಾರ್ಥಿಸಿದರು. ವಕೀಲ ನಿತಿನ್ ಬರಾಯ ಅವರು ಕ್ರೀಡಾಕೂಟವನ್ನು ನಿರೂಪಿಸಿದರು.

Exit mobile version