ಬೆಳ್ತಂಗಡಿ: ಅ.18ರಂದು ಏಕಾಏಕಿ ಶುರುವಾದ ಸಿಡಿಲು ಸಹಿತ ಧಾರಾಕಾರ ಮಳೆಯ ನಡುವೆ ಬೆಳ್ತಂಗಡಿ ವಕೀಲರ ಭವನದ ಕೆಲ ಭಾಗಗಳಿಗೆ ಸಿಡಿಲು ಬಡಿದಿದೆ.
ವಕೀಲರ ಭವನದ ಗೋಡೆಗೆ ಅಲ್ಲಲ್ಲಿ ಹಾನಿಯಾಗಿದ್ದು, ಕಾರ್ಯ ನಿರ್ವಹಿಸುತ್ತಿದ್ದ ಕಂಪ್ಯೂಟರ್, ಸಿಸಿಟಿವಿಗೆ ತೊಂದರೆ ಆಗಿದ್ಯಾ ಅನ್ನುವುದು ಮುಂದೆ ಪರೀಕ್ಷಿಸಿದ ನಂತರ ತಿಳಿಯಬಹುದು. ವಕೀಲರ ಭವನದಲ್ಲಿದ್ದ ವಕೀಲರು, ಸಿಬ್ಬಂದಿಗಳಲ್ಲಿ ಆತಂಕ ಸೃಷ್ಟಿಸಿತ್ತು.