Site icon Suddi Belthangady

ಉಜಿರೆ: ಎಸ್.ಡಿ.ಎಂ. ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ಪೋಷಕರ ಸಭೆ

ಉಜಿರೆ: ಮಕ್ಕಳಿಗೆ ಹೆತ್ತವರಿಂದ ಅವರ ಜವಾಬ್ದಾರಿಗಳ ಅರಿವು ಮೂಡಿಸುವುದು ಇಂದಿನ ದಿನಮಾನಗಳಲ್ಲಿ ಬಹಳ ಅಗತ್ಯವಾಗಿದೆ. ವಿದ್ಯಾರ್ಥಿಗಾಗಿ ಮಾಡುವ ಖರ್ಚು-ವೆಚ್ಚಗಳ ಕುರಿತಾಗಿ ಅವರಲ್ಲಿ ಜಾಗೃತಿ ಮೂಡಿಸಬೇಕು. ವಿದ್ಯಾರ್ಥಿ ತನ್ನ ಸಾಧನೆಯಲ್ಲಿ ಮೇಲುಗೈ ಸಾಧಿಸಿದರೆ ಮಾತ್ರವೇ ಅವನು ಆಸೆ ಪಟ್ಟ ವಸ್ತುಗಳು ಕೈಸೇರುವಂತಾಗಬೇಕು. ಹಾಗೂ ಬೇರೆಯವರ ಬಗ್ಗೆ ವಿಮರ್ಶೆ ಮಾಡುವ ಬದಲು ನಮ್ಮ ಒಳಗನ್ನು ನೋಡುವ ಗುಣ ಬೆಳೆಸಬೇಕು. ಕಲಿಕೆಯಲ್ಲಿ ಅಂಕದ ಜೊತೆಗೆ ಜೀವನ ಶಿಕ್ಷಣ ರೂಢಿಗತವಾಗಬೇಕೆಂದು ಇದಕ್ಕೆ ಎಲ್ಲ ಪೋಷಕರ ಹಾಗೂ ಶಿಕ್ಷಕರ ಸಹಕಾರ ಹಾಗೂ ಮಾರ್ಗದರ್ಶನ ಬಹಳ ಅತ್ಯಗತ್ಯ ಎಂದು
ಎಸ್. ಡಿ. ಎಂ. ಶಿಕ್ಷಣ ಸಂಸ್ಥೆಗಳ ಮಾಹಿತಿ ತಂತ್ರಜ್ಞಾನ ಮತ್ತು ವಿದ್ಯಾರ್ಥಿ ನಿಲಯಗಳ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿರುವ ಶ್ರೀಯುತ ಪೂರಣ್ ವರ್ಮಾರವರು
ಪೋಷಕರ ಸಭಾ ಕಾರ್ಯಕ್ರಮದಲ್ಲಿ ಮಾತನಾಡುತ್ತ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾಲೇಜಿನ ಪ್ರಾಂಶುಪಾಲ ಸುನಿಲ್ ಪಂಡಿತ್ ಅವರು ವಿದ್ಯಾರ್ಥಿ ಹೆತ್ತವರಿಗೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಕುರಿತು ಅಗತ್ಯ ಮಾಹಿತಿಗಳನ್ನು ನೀಡಿದರು. ಎಸ್.ಡಿ. ಎಂ.ಸಂಸ್ಥೆಗಳ ವಸತಿ ನಿಲಯಗಳ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಯುವರಾಜ ಪೂವಣಿಯವರು ಮಾತನಾಡಿ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಯ ಜವಾಬ್ದಾರಿಗಳ ಕುರಿತು ಅಗತ್ಯ ಮಾಹಿತಿಗಳನ್ನು ತಿಳಿಸಿದರು.

ಕಾಲೇಜಿನ ಉಪ ಪ್ರಾಂಶುಪಾಲ ಮನೀಶ್ ಕುಮಾರ್ ಹಾಗೂ ಭೌತ ಶಾಸ್ತ್ರ ಉಪನ್ಯಾಸಕ ವಿಕ್ರಂ ಪಿ. ಅವರು ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಸಂಸ್ಕೃತ ವಿಭಾಗ ಮುಖ್ಯಸ್ಥ ಮಹೇಶ್ ಎಸ್. ಎಸ್. ಕಾರ್ಯಕ್ರಮ ನಿರ್ವಹಿಸಿದರು.

Exit mobile version