ಬೆಳ್ತಂಗಡಿ: ತಾಲೂಕಿನಲ್ಲಿ ಮೊಬೈಲ್ ಫೋನ್‌ಗಳ ಮಾರಾಟ ಹಾಗೂ ಸೇವೆ ನೀಡುವಲ್ಲಿ ಹೆಸರುವಾಸಿಯಾಗಿರುವ ಇಮೇಜ್ ಮೊಬೈಲ್ಸ್‌ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಮೆಗಾ ಮೊಬೈಲ್ ಹಬ್ಬ ಮಾರಾಟ ಮೇಳ ಆರಂಭವಾಗಿದ್ದು ಸ್ಮಾರ್ಟ್ ಫೋನ್ ಖರೀದಿಸಿ ಲಕ್ಕಿ ಕೂಪನ್ ಪಡೆದು ಆಕರ್ಷಕ ಬಹುಮಾನ ಪಡೆದುಕೊಳ್ಳಲು ಗ್ರಾಹಕರು ಮುಗಿಬಿದ್ದಿದ್ದಾರೆ.
ಇಮೇಜ್ ಮೊಬೈಲ್‌ನ ಬೆಳ್ತಂಗಡಿ ಹಾಗೂ ಉಜಿರೆ ಶಾಖೆಯಲ್ಲಿ ಈ ಆಫರ್ ಲಭ್ಯವಿದ್ದು, ಪ್ರತಿ ಐಫೋನ್ ಖರೀದಿಗೆ ಚಾರ್ಜರ್ ಮತ್ತು ಇಯರ್ ಬಡ್ಸ್ ಸಂಪೂರ್ಣ ಉಚಿತವಾಗಿದ್ದು, ಶೂನ್ಯ ಬಡ್ಡಿದರದಲ್ಲಿ ಹಾಗೂ ಶೂನ್ಯ ಮುಂಗಡ ಪಾವತಿಯೊಂದಿಗೆ ಐಫೋನ್ ಹಾಗೂ ವಿವಿಧ ಕಂಪೆನಿಗಳ ಸ್ಮಾರ್ಟ್ ಫೋನ್ ಖರೀದಿಸಲು ಅವಕಾಶ ಒದಗಿಸಲಾಗಿದೆ.
ವಿವಿಧ ಕಂಪೆನಿಗಳ ಸ್ಮಾರ್ಟ್ ಫೋನ್ ಖರೀದಿಯ ಮೇಲೂ ಉಡುಗೊರೆಗಳು ದೊರೆಯಲಿದ್ದು ಮೊಬೈಲ್ ಬಿಡಿಭಾಗಗಳ ಮಾರಾಟದ ಮೇಲೆಯೂ ಭಾರಿ ದರ ಕಡಿತ ಸೇವೆ ದೊರೆಯಲಿದೆ ಎಂದು ಇಮೇಜ್ ಗ್ರೂಪ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.