Site icon Suddi Belthangady

ಕಲ್ಲಡ್ಕ ಕಲಾನಿಕೇತನ ಡ್ಯಾನ್ಸ್ ಫೌಂಡೇಷನ್ ಸಂಸ್ಥೆಯ 25ರ ಸಂಭ್ರಮ- ರಜತ ಕಲಾಯಾನ

ಬೆಳ್ತಂಗಡಿ: ವಿದುಷಿ ವಿದ್ಯಾ ಮನೋಜ್ ಅವರ ನಿರ್ದೇಶನದಲ್ಲಿ ನಡೆಯುತ್ತಿರುವ ಕಲ್ಲಡ್ಕ ಕಲಾನಿಕೇತನ ಡ್ಯಾನ್ಸ್ ಫೌಂಡೇಷನ್ ಸಂಸ್ಥೆಯು ಅ. 26, 2001ರಂದು ಆರಂಭಗೊಂಡಿತು. ನೂರಾರು ವಿದ್ಯಾರ್ಥಿಗಳಿಗೆ ನಿರಂತರ ಭರತನಾಟ್ಯ ಶಿಕ್ಷಣವನ್ನು ನೀಡುತ್ತಿರುವ ಕರಾವಳಿಯ ಈ ಪ್ರಸಿದ್ಧ ನೃತ್ಯ ಸಂಸ್ಥೆಯು ಇದೀಗ 25ನೇ ವರ್ಷಕ್ಕೆ ಪಾದಾರ್ಪಣೆಯನ್ನು ಮಾಡುತ್ತಿದೆ. ರಾಜ್ಯ ಹಾಗೂ ಹೊರರಾಜ್ಯಗಳ ಪ್ರತಿಷ್ಠಿತ ವೇದಿಕೆಗಳಲ್ಲಿ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿರುವ ಕಲಾನಿಕೇತನ ಸಂಸ್ಥೆಯು ಜನಮನ್ನಣೆಗೆ ಪಾತ್ರವಾಗಿದೆ. ರಜತ ಕಲಾಯಾನ ಎಂಬ ಶೀರ್ಷಿಕೆಯೊಂದಿಗೆ 25ರ ಸಂಭ್ರಮವನ್ನು ಅ. 26ರಂದು ಪ್ರಾರಂಭಿಸುತ್ತಿದ್ದಾರೆ.

ಕಲಾನಿಕೇತನ ಸಂಸ್ಥೆಯ ಮೂಲಕ ವಿದ್ವತ್ ಪದವಿ ಪಡೆದಿರುವ ಶಿಷ್ಯ ವೃಂದದವರಿಂದ ಭರತನಾಟ್ಯ ಮಾರ್ಗಂ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.

Exit mobile version