Site icon Suddi Belthangady

ಬೆಳ್ತಂಗಡಿ: ಹುಣ್ಸೆಕಟ್ಟೆ ಕ್ರಾಸ್, ಗೇರುಕಟ್ಟೆ, ಪರಪ್ಪು, ಕೊಯ್ಯೂರು ಸರ್ಕಾರಿ ಬಸ್ ಸಂಚಾರ ಪ್ರಾರಂಭ

ಬೆಳ್ತಂಗಡಿ: ಸಾರ್ವಜನಿಕರ ಮತ್ತು ವಿದ್ಯಾರ್ಥಿಗಳ ಬಹುದಿನದ ಬೇಡಿಕೆಯಾಗಿದ್ದ ಬೆಳ್ತಂಗಡಿ ನಗರದಿಂದ ಕೆಇಬಿ ಮಾರ್ಗವಾಗಿ ಹುಣ್ಸೆಕಟ್ಟೆ ಕ್ರಾಸ್, ಗೇರುಕಟ್ಟೆ ಪರಪ್ಪು, ಅದುರ್ ಪೆರಾಲ್ ಮಾರ್ಗವಾಗಿ ಕೊಯ್ಯೂರಿಗೆ ಪ್ರಯಾಣಿಕರಿಗೆ ಮತ್ತು ವಿದ್ಯಾರ್ಥಿಗಳ ಹಿತ ದೃಷ್ಟಿಯನ್ನು ಇಟ್ಟುಕೊಂಡು ಇಂದಿನಿಂದ ಸರ್ಕಾರಿ ಬಸ್ ಸಂಚಾರ ಪ್ರಾರಂಭವಾಗಿದೆ.

ನೂತನವಾಗಿ ಪ್ರಾರಂಭಗೊಂಡ ಬಸ್ಸಿಗೆ ಕೊಯ್ಯೂರಿನಲ್ಲಿ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಅದ್ದೂರಿ ಸ್ವಾಗತವನ್ನು ಕೋರಿದರು.

ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಪದ್ಮನಾಭ ಸಾಲಿಯನ್, ಸದಸ್ಯ ಶರೀಫ್ ಶಬರಬೈಲ್, ಮಾಜಿ ತಾಲೂಕು ಪಂಚಾಯತ್ ಸದಸ್ಯ ಪ್ರವೀಣ್ ಗೌಡ ಕೊಯ್ಯೂರು, ಕೊಯ್ಯೂರು ಗ್ರಾಮ ಪಂಚಾಯತಿ ಉಪಾಧ್ಯಕ್ಷ ಹರೀಶ್ ಗೌಡ, ಸದಸ್ಯರಾದ ಲೋಕೇಶ್ ಗೌಡ, ಲತೀಫ್ ಉನಾಲು, ಚಂದ್ರಾವತಿ, ಹೇಮಾವತಿ, ತಾಲೂಕು ಆರೋಗ್ಯ ರಕ್ಷಾ ಸಮಿತಿಯ ಸದಸ್ಯ ವೆಂಕಣ್ಣ ಕೊಯ್ಯೂರು, ಶಾಲಾ ಉಪನ್ಯಾಸಕರಾದ ಮೋಹನ್ ಗೌಡ, ರಾಮಚಂದ್ರ ದೊಡ್ಮನಿ, ಪ್ರಮುಖರಾದ ನವೀನ್ ಕುಮಾರ್ ಮೊಹಮದ್ ಸಿದ್ದಿಕ್, ಪರಮೇಶ್ವರ್ ಗೌಡ, ಸಲೀಂ ಪಾತ್ರಾಲಾ, ಕೃಷ್ಣಕುಮಾರ್,
ಡೀಕಯ್ಯ, ಯೂಸುಫ್, ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Exit mobile version