Site icon Suddi Belthangady

ಕಲ್ಲೇರಿಯಲ್ಲಿ ಕೌಶಲ್ಯ ಅಭಿವೃದ್ಧಿ ಉಚಿತ ಸ್ವ ಉದ್ಯೋಗ ತರಬೇತಿಯ ಸಮಾರೋಪ

ಕಲ್ಲೇರಿ: ಮಂಗಳೂರು ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಪ್ರಾಯೋಜಕತ್ವದಲ್ಲಿ, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಹಾಗೂ ಉಪ್ಪಿನಂಗಡಿ ಶಾಖೆ ಬ್ಯಾಂಕ್ ಒಫ್ ಬರೋಡ ಅವರ ನೇತೃತ್ವದಲ್ಲಿ, 3 ತಿಂಗಳ ಉಚಿತ ಟೈಲರಿಂಗ್ ತರಬೇತಿಯ ಸಮಾರೋಪ ಸಮಾರಂಭ ತಣ್ಣೀರುಪಂಥ ಹಾಲು ಉತ್ಪಾದಕರ ಸೊಸೈಟಿ ಸಭಾಂಗಣ ಕಲ್ಲೇರಿಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಮಂಗಳೂರು ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹನಾಧಿಕಾರಿ ಜ್ಯೋತಿರಾಜ್ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ ಮಹಿಳೆಯರ ಕೌಶಲ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸ್ವ ಉದ್ಯೋಗ ಮಾಡಲು ಮಹಿಳೆಯರಲ್ಲಿ ಛಲ ಇಚ್ಛಾ ಶಕ್ತಿ ಇದ್ದಲ್ಲಿ ಯಾವ ಕೆಲಸ ಕೂಡ ಸುಲಭ ಸಾಧ್ಯ, ಇನ್ನೂ ಹೆಚ್ಚಿನ ಕೌಶಲ್ಯ ಪಡೆದು ಸ್ವ ಉದ್ಯೋಗಕ್ಕೆ ಎಲ್ಲರೂ ಪ್ರಯತ್ನ ಪಡೆಯಿರಿ ಎಂದು ಕರೆ ನೀಡಿದರು. ಮಣಿಪಾಲ ಭಾರತೀಯ ವಿಕಾಸ ಟ್ರಸ್ಟ್ ನ ಕಾರ್ಯಕ್ರಮ ವ್ಯವಸ್ಥಾಪಕ ಜೀವನ್ ಕೊಲ್ಯ ಟೈಲರಿಂಗ್ ಗೆ ಇರುವ ಅವಕಾಶಗಳ ಬಗ್ಗೆ ತಿಳಿಸಿ ತರಬೇತಿ ನಂತರ ಎಲ್ಲಾ ಅವಕಾಶ ಸದುಪಯೋಗ ಪಡಿಸಿಕೊಳ್ಳಲು ಸಲಹೆ ನೀಡಿ, ಬ್ಯಾಂಕ್ ನಲ್ಲಿ ಸ್ವ ಉದ್ಯೋಗಕ್ಕೆ ಸಿಗುವ ಸೌಲಭ್ಯಗಳ ವಿವರಿಸಿದರು.

ತರಬೇತಿ ಪೂರೈಸಿದ ಮಹಿಳೆಯರು ತರಬೇತಿ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ತಣ್ಣೀರು ಪಂಥ ಪಂಚಾಯತ್ ಹಾಲು ಉತ್ಪಾದಕರ ಸೊಸೈಟಿ ಕಾರ್ಯದರ್ಶಿ ಜಯರಾಜ್, ಬ್ರೈಡಲ್ ಮೇಕ್ಅಪ್ ತರಬೇತುದಾರರಾದ ಸಂಧ್ಯಾ ಸಾತ್ವಿಕ್, ಟೈಲರಿಂಗ್ ತರಬೇತುದಾರರಾದ ಮೀನಾಕ್ಷಿ ಉಪಸ್ಥಿತರಿದ್ದರು. 3 ತಿಂಗಳ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ ಮಹಿಳೆಯರಿಗೆ ಪ್ರಮಾಣಪತ್ರ ವಿತರಿಸಲಾಯಿತು. ಸುಖಿತಾ ಶೆಟ್ಟಿ ಸ್ವಾಗತಿಸಿ, ಸ್ನೇಹಾ ಭಟ್ ಕಾರ್ಯಕ್ರಮ ನಿರೂಪಿಸಿದರು. ವೇದಾವತಿ ಶೆಟ್ಟಿ ಧನ್ಯವಾದ ಗೈದರು.

Exit mobile version