Site icon Suddi Belthangady

ಬೆಳ್ತಂಗಡಿ: ಗಿರೀಶ್ ಮಟ್ಟಣ್ಣನವ‌ರ್ ಗೆ ನೋಟಿಸ್

ಬೆಳ್ತಂಗಡಿ: ಬಂದೂಕು ಪ್ರಕರಣ ಹಾಗೂ ಗಡೀಪಾರು ಆದೇಶ ಬಳಿಕ ಮಹೇಶ್ ಶೆಟ್ಟಿ ತಿಮರೋಡಿ ತಲೆಮರೆಸಿಕೊಂಡಿರುವ ವಿಚಾರಕ್ಕೆ ಸಂಬಂಧಿಸಿ ಮಾಧ್ಯಮ ಹೇಳಿಕೆ ನೀಡಿರು ಹೇಳಿಕೆ ನೀಡಿರುವ ಗಿರೀಶ್ ಮಟ್ಟಣ್ಣನವ‌ರ್ ವಿರುದ್ದ ಬೆಳ್ತಂಗಡಿ ಪೊಲೀಸರು ನೋಟಿಸ್‌ ಜಾರಿ ಮಾಡಿದ್ದು, ಪೊಲೀಸರು ಬುಧವಾರ ಮಟ್ಟಣ್ಣನವ‌ರ್ ಅವರ ಬೆಂಗಳೂರಿನ ಮನೆಗೆ ತೆರಳಿ ನೋಟಿಸ್‌ ನೀಡಿ ಅ. 18ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ.

ಮಟ್ಟಣ್ಣನವ‌ರ್ ಅ. 11ರಂದು ಬೆಳ್ತಂಗಡಿಯಲ್ಲಿ ಮಾಧ್ಯಮಗಳಿಗೆ ಹೇಳಿಕೆ ಕೊಡುವ ಸಂದರ್ಭ ಮಹೇಶ್ ಶೆಟ್ಟಿಯವರು ಎಲ್ಲೂ ಓಡಿ ಹೋಗಿಲ್ಲ. ನಾನು ಇವಾಗ ಉಜಿರೆಯಲ್ಲಿ ಮಾತಾಡಿಕೊಂಡು ಬಂದೆ, ಪೊಲೀಸರಿಗೆ ಸಿಗದೆ ಇದ್ರೆ ಅದು ನನ್ನ ತಪ್ಪಾ ಎಂಬ ಹೇಳಿಕೆ ನೀಡಿದ್ದರು.

Exit mobile version