Site icon Suddi Belthangady

ಅ.16 ರಿಂದ 31ರ ತನಕ ನ್ಯೂಸಿಟಿಯಲ್ಲಿ 40ಶೇ. ಭಾರಿ ರಿಯಾಯಿತಿ

ಗುರುವಾಯನಕೆರೆ: ನ್ಯೂಸಿಟಿ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್‌ನಲ್ಲಿ ದೀಪಾವಳಿ ಹಬ್ಬ ಪ್ರಯುಕ್ತ ಅ.16 ರಿಂದ ಅ.31 ವರೆಗೆ 40 ಶೇಕಡಾವರೆಗೂ ರಿಯಾಯಿತಿ ದರದಲ್ಲಿ ಮಾರಾಟ ಗುರುವಾಯನಕೆರೆ ಮತ್ತು ಉಜಿರೆಯ ಮಳಿಗೆಯಲ್ಲಿ ನಡೆಯಲಿದೆ.

ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್‌ಗೆ ಹೆಸರುವಾಸಿಯಾದ ನ್ಯೂ ಸಿಟಿ ಪ್ರತಿಷ್ಠಿತ ಸ್ಮರಣಿಕಾ ಸಂಸ್ಥೆಯು ಈ ಸಲದ ದೀಪಾವಳಿ ಹಬ್ಬವನ್ನು ಸ್ಮರಣೀಯವಾಗಿ ಆಚರಿಸಲು ಸಜ್ಜಾಗಿದೆ. ದೀಪಾವಳಿ ಪ್ರಯುಕ್ತ ವಿಶೇಷ ಹಾಗೂ ಆಕರ್ಷಕ ಉಡುಗೊರೆಯ ಮಾರಾಟ ಮೇಳವನ್ನು ಸಂಸ್ಥೆಯಲ್ಲಿ ಆಯೋಜಿಸಿದೆ. ಗುರುವಾಯನಕೆರೆ ಸಮೀಪದ ಕಾರ್ಕಳ ರಸ್ತೆ ಮತ್ತು ಉಜಿರೆ ಕಾಲೇಜ್ ರಸ್ತೆಯ ಎಸ್ .ಬಿ.ಐ ಬ್ಯಾಂಕ್ ಎದುರು ಇರುವ ಸಹ ಸಂಸ್ಥೆಯಲ್ಲಿಯೂ ವಿವಿಧ ರೀತಿಯ ಉತ್ಪನ್ನಗಳು ವಿಶೇಷ ಆಕರ್ಷಕ ಉಡುಗೊರೆಯೊಂದಿಗೆ ಗ್ರಾಹಕರಿಗೆ ಲಭ್ಯವಿದೆ. ದೀಪಾವಳಿ ಹಬ್ಬ ಪ್ರಯುಕ್ತ ಪ್ರಸಿದ್ದ ಬ್ರಾಂಡ್‌ಗಳು, ಎಕ್ಸಚೇಂಜ್ ಆಫರ್, ಗೃಹೋಪಯೋಗಿ ವಸ್ತುಗಳ 2 ಮೇಲೆ 0% ಬಡ್ಡಿರಹಿತ ಸಾಲ ಸೌಲಭ್ಯ, ಉತ್ತಮ ಗ್ಯಾರಂಟಿ ಸರ್ವಿಸ್‌ನೊಂದಿಗೆ, ನಗುಮುಖದ ಸೇವೆ ಇರಲಿದೆ. ಉಚಿತ ಸಾಗಾಟ, ಬ್ರಾಂಡ್ ವಸ್ತುಗಳ ನೇರ ವೀಕ್ಷಣೆ ಮತ್ತು ಮಾರಾಟ, ಮನೆಯ ಅಂದಕ್ಕೆ ತಕ್ಕಂತೆ ವಿನೂತನ ಶೈಲಿಯ ಗೃಹಪಯೋಗಿ ವಸ್ತುಗಳ ಬೃಹತ್ ಸಂಗ್ರಹ, ಗ್ರಾಹಕರಿಗೆ ಉತ್ತಮ ಗುಣಮಟ್ಟದ ವಸ್ತುಗಳ ಪೂರೈಕೆಯನ್ನು ಮಾಡಲಾಗುತ್ತಿದ್ದು ಗ್ರಾಹಕರು ಇದರ ಪ್ರಯೋಜನ ಪಡೆಯಬಹುದಾಗಿದೆ.

ಎಲೆಕ್ಟ್ರಾನಿಕ್ ಸಂಸ್ಥೆಯಲ್ಲಿ ಮೆಗಾ ಡಿಸ್ಕೊಂಟ್ ಸೇಲ್ ಪ್ರಾರಂಭಗೊಂಡಿದೆ ಹಾಗೂ ಬಂಪರ್ ಬಹುಮಾನಗಳನ್ನು ಗ್ರಾಹಕರು ಗೆಲ್ಲುವ ಸುವರ್ಣಾವಕಾಶವಿದೆ ಎಂದು ಸಂಸ್ಥೆಯ ಮಾಲಕ ಲೋಕೇಶ್ ತಿಳಿಸಿದ್ದಾರೆ.

ಕಳೆದ 16 ವರ್ಷಗಳಿಂದ ಸಂಸ್ಥೆಯಲ್ಲಿ ಕಡಿಮೆ ದರದಲ್ಲಿ ಗ್ರಾಹಕರ ಅನುಕೂಲಕ್ಕಾಗಿ ವಸ್ತುಗಳನ್ನು ಪೂರೈಸಲಾಗುತ್ತಿದೆ. ಯಾವುದೇ ಮುಂಗಡ ಪಾವತಿಯಿಲ್ಲದೆ ಇಲೆಕ್ಟ್ರಾನಿಕ್ ಹಾಗೂ ಫರ್ನಿಚರ್ ವಸ್ತುಗಳನ್ನು ಮನೆಗೊಯ್ಯಲು ಅವಕಾಶವನ್ನು ಗ್ರಾಹಕರಿಗೆ ಕಲ್ಪಿಸಲಾಗಿದೆ ಎಂದರು.

Exit mobile version