Site icon Suddi Belthangady

ಅ.19: ದೀಪಾವಳಿ ಹಬ್ಬದ ಪ್ರಯುಕ್ತ ಕೆಸರ್‌ದ ಕಂಡಡ್ ಪರ್ಬದ ಗೊಬ್ಬು

ಬೆಳ್ತಂಗಡಿ: ನಾರ್ಯ ಪೊದುಂಬಿಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಗ್ರಾಮ ದೈವಗಳ ಉತ್ಸವ ಸಮಿತಿ ಎರ್ಮುಂಜ ಬೈಲು, ಧರ್ಮಸ್ಥಳ ಗ್ರಾಮ ಇದರ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಮತ್ತು ಶ್ರೀ ಷಣ್ಮುಖ ಭಜನಾ ಮಂಡಳಿ ಹಾಗೂ ಊರ-ಪರವೂರಿನವರ ಸಹಕಾರದೊಂದಿಗೆ ಕೊಯ್ಯೂರು ನಂದಕುಮಾರ ತಂತ್ರಿಗಳ ಮಾರ್ಗದರ್ಶನದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಕೆಸರ್‌ ಕಂಡಡ್ ಪರ್ಬದ ಗೊಬ್ಬು ಕಾರ್ಯಕ್ರಮ ಅ.19ರಂದು ವಿವಿಧ ಆಟೋಟ ಸ್ಪರ್ಧೆಗಳ ಮೂಲಕ ಪೊದುಂಬಿಲ ದೇವಸ್ಥಾನದಲ್ಲಿ ನಡೆಯಲಿದೆ.

ಉದ್ಘಾಟನೆಯನ್ನು ಪೊದುಂಬಿಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕ ಪ್ರಸಾದ್ ಪಾಂಗಣ್ಣಾಯ ಮಾಡಲಿದ್ದಾರೆ. ಕೆಸರ್ ಕಂಡಡ್ ಪರ್ಬದ ಗೊಬ್ಬು ಆಚರಣಾ ಸಮಿತಿಯ ಅಧ್ಯಕ್ಷ ಕುಮಾರ್ ನೂಜಿಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಾರ್ಯ ಪುರಂದರ ರಾವ್, ಪ್ರಗತಿಪರ ಕೃಷಿಕ ಸೂರ್ಯನಾರಾಯಣ ರಾವ್, ಉದ್ಯಮಿ ಸಂತೋಷ್ ಜೈನ್, ಪ್ರಗತಿಪರ ಕೃಷಿಕ ಚಂದ್ರಶೆಟ್ಟಿ, ಸೂರಪ್ಪ ಪೂಜಾರಿ, ಧರ್ಮಸ್ಥಳ ಗ್ರಾಮ ಪಂಚಾಯತ್ ಸದಸ್ಯ ರೇವತಿ, ನಾರ್ಯ ಕೃಷ್ಣ ಜನ್ಮಾಷ್ಟಮಿ ಸಮಿತಿಯ ಅಧ್ಯಕ್ಷ ಪ್ರಸಾದ್‌, ನಾರ್ಯ ಶ್ರೀ ಷಣ್ಮುಖ ಭಜನಾ ಮಂಡಳಿಯ ಅಧ್ಯಕ್ಷ ವಿದ್ಯಾ ಸುರೇಂದ್ರ, ಪ್ರಗತಿಪರ ಕೃಷಿಕ ಕುಂಞಣ್ಣ ಗೌಡ ಉಪಸ್ಥಿತಿ ಇರಲಿದ್ದಾರೆ ಎಂದು ಕಾರ್ಯದರ್ಶಿ ನಿಶಾನ್ ಬಂಗೇರ ನಾರ್ಯ ಹಾಗೂ ಸುಧಾಕರ್ ಗೌಡ ಧರ್ಮಸ್ಥಳ ತಿಳಿಸಿದ್ದಾರೆ.

ಬೆಳಿಗ್ಗೆಯಿಂದ ಉಜಿರೆ ಹಿಪ್ – ಬಾಯ್ಸ್ ಹಾಗೂ ಊರಿನ ಜನರಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ. ಸಂಜೆ 6 ಗಂಟೆಗೆ ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣೆ ನಡೆಯಲಿದೆ.

Exit mobile version