Site icon Suddi Belthangady

ಧರ್ಮಸ್ಥಳ: ಮುಂಡ್ರುಪಾಡಿ ನಿವಾಸಿ ಗಂಗಾಧರ ಬೇಕಲ್ ನಿಧನ

ಧರ್ಮಸ್ಥಳ: ಮುಂಡ್ರುಪಾಡಿ ನಿವಾಸಿ ಅಂಗಡಿ ವ್ಯಾಪಾರಸ್ಥ, ಧರ್ಮಸ್ಥಳ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ನಿರ್ದೇಶಕರು ಹಾಗೂ ಭಾರತೀಯ ಜನತಾ ಪಾರ್ಟಿಯ ಸಕ್ರಿಯ ಸದಸ್ಯ ಗಂಗಾಧರ್ ಬೇಕಲ್ (57ವ) ಅ.15ರಂದು ರಾತ್ರಿ‌ ನಿಧನರಾಗಿದ್ದಾರೆ.

ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಗಂಗಾಧರ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಧರ್ಮಸ್ಥಳದಲ್ಲಿ ಭಕ್ತಿಗೀತೆಗಳ ಕ್ಯಾಸೆಟ್ ಗಳನ್ನು ಮಾರುತ್ತಾ, ಹಲವು ಹಾಡುಗಳ ನಿರ್ಮಾಣದಲ್ಲಿಯೂ ತನ್ನನ್ನು ತಾನು ಬೇಕಲ್ ತೊಡಗಿಸಿಕೊಂಡಿದ್ದರು. ಅವರು ಪತ್ನಿ ಮಲ್ಲಿಕಾ, ಮಕ್ಕಳಾದ ಭುವನ್, ರಕ್ಷಿತಾ ಮತ್ತು ಶ್ರಾವಣಿ ಅವರನ್ನು ಅಗಲಿದ್ದಾರೆ.

Exit mobile version