ಮಡಂತ್ಯಾರು: ರೋಟರಿ ಕ್ಲಬ್ ನಿಂದ ಅ.15ರಂದು ಮಾಲಾಡಿ ಗ್ರಾಮದ 4 ಅಂಗನವಾಡಿ ಕೇಂದ್ರ ಮತ್ತು ಮಡಂತ್ಯಾರು ಗ್ರಾಮ ಪಂಚಾಯತಿಗೆ ಒಳಪಟ್ಟ 3 ಅಂಗನವಾಡಿ ಕೇಂದ್ರದ 110 ಮಂದಿ ಪುಟಾಣಿ ಮಕ್ಕಳಿಗೆ ಪ್ರೊಟೀನ್ ಪೌಡರ್ ವಿತರಿಸಲಾಯಿತು.
ಮಹಾವೀರ ಮೆಡಿಕಲ್ಸ್ ನ ಮಾಲಕ Rtn.ಉದಯ ಕುಮಾರ್ ಜೈನ್ ಅವರ ಪ್ರಾಯೋಜಕತ್ವದಲ್ಲಿ ಅಧ್ಯಕ್ಷ Rtn.PHF. ಮ್ಯಾಕ್ಸಿಮ್ ಅಲ್ಬುಕರ್ಕ್ ಮತ್ತು ಕಾರ್ಯದರ್ಶಿ Rtn.PHF. ವಾಸುದೇವ ಗೌಡ ಅವರ ಮುಂದಾಳತ್ವದಲ್ಲಿ Rtn.PHF. ಸೆಲೆಸ್ಟಿನ್ ಡಿಸೋಜಾ, Rtn. ದಿನಕರ ಶೆಟ್ಟಿಯವರು ಉಪಸ್ಥಿತರಿದ್ದರು. ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರ ಮುಖಾಂತರ ಈ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಏರ್ಪಡಿಸಿ ಮಕ್ಕಳಿಗೆ ಪ್ರೊಟೀನ್ ಪೌಡರನ್ನು ಹಂಚಿ, ರೋಟರಿ ಕ್ಲಬ್ ಗೆ ಧನ್ಯವಾದ ಕೋರಿದರು.