Site icon Suddi Belthangady

ಬಳಂಜ: ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿಯಿಂದ ಹರೀಶ್ ನೆರಿಯ ಮನೆಗೆ ಭೇಟಿ

ಬಳಂಜ: ಒಂದು ವಾರಗಳ ಹಿಂದೆ, ಸುಮಾರು 24 ವರ್ಷಗಳಿಂದ ಭಜನಾ ಸೇವೆಯಲ್ಲಿ, ತನ್ನನ್ನು ತಾನು ತೊಡಗಿಸಿಕೊಂಡು, ಅದೆಷ್ಟೋ ಭಜನೆ ಮಂಡಳಿಗಳನ್ನು ಕಟ್ಟಿ, ಬೆಳೆಸಿ ಸಂಸ್ಕಾರಯುತ, ಮಕ್ಕಳನ್ನು ಬೆಳೆಸಿ, ಸಮಾಜಕ್ಕೆ ಮಾದರಿಯಾಗಿರುವ ಹರೀಶ್ ನೆರಿಯ ಇವರ ಮನೆ ಆಗ್ನಿ ಅವಘಡದಿಂದ ಸಂಪೂರ್ಣ ಸುಟ್ಟು ಹೋಗಿದ್ದು ಅಪಾರ ನಷ್ಟವಾಗಿದೆ. ಇದನ್ನು ತಿಳಿದ ಬಳಂಜದ ಬ್ರಹ್ಮಶ್ರೀಕುಣಿತ ಭಜನಾ ಮಂಡಳಿ ಸದಸ್ಯರು ಹರೀಶ್ ನೆರಿಯ ಮನೆಗೆ ಭೇಟಿ ನೀಡಿ, ಮಂಡಳಿಯಿಂದ, ಹಾಗೂ ದಾನಿಗಳ ಸಹಕಾರದಿಂದ, ಸಹಾಯ ಹಸ್ತವನ್ನು ನೀಡಿರುತ್ತಾರೆ.

ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ಸಂಚಾಲಕ ಹರೀಶ್ ವೈ. ಚಂದ್ರಮ, ಶ್ರೀ ಕೃಷ್ಣಭಜನ ಮಂಡಳಿಯ ಪ್ರಮೋದ್, ಗುರುಗಳು ಮಾನ್ಯ, ಅಧ್ಯಕ್ಷರು ಪ್ರಸಿದ್ಧಿ ಶೆಟ್ಟಿ, ಪ್ರತಿಕ್ಷ, ಮನ್ವಿತ, ಉಪಸ್ಥಿತರಿದ್ದರು.

Exit mobile version