ಬಳಂಜ: ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಜಿಲ್ಲೆಯ ಹೆಸರಾಂತ ಭಜನಾ ಮಂಡಳಿಗಳಲ್ಲಿ ಒಂದಾದ ಬಳಂಜದ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ಸದಸ್ಯರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ನಡೆಯುವ ಶ್ರೀ ಗಂಗಾಷ್ಟಮಿ ಉತ್ಸವದ ಮೆರವಣಿಗೆಯಲ್ಲಿ ಕುಣಿತ ಭಜನೆಯನ್ನು ನೀಡಲು ಈಗಾಗಲೇ ತೆರಳಿದ್ದಾರೆ.
ಸಮಾಜ ಸೇವಕ ಹರೀಶ್ ವೈ. ಚಂದ್ರಮ ಅವರ ಪ್ರಧಾನ ಸಂಚಾಲಕತ್ವದಲ್ಲಿ ಹಲವಾರು ಕಾರ್ಯಕ್ರಮಗಳನ್ನು ನೀಡಿರುವ ಮಂಡಳಿಯು ಸಮಾಜದ ಅಶಕ್ತ ಕುಟುಂಬಗಳಿಗೂ ಆರ್ಥಿಕ ನೆರವನ್ನು ನೀಡುತ್ತಿದೆ.
ಮಂಡಳಿಯ ಸದಸ್ಯರ ವಿದ್ಯಾಭ್ಯಾಸಕ್ಕೂ ಸಹಾಯವನ್ನು ಮಾಡುತ್ತಿದ್ದಾರೆ. ಮಂಡಳಿಯ ಅಧ್ಯಕ್ಷ್ಯಯಾಗಿ ಪ್ರಸಿದ್ದಿ ಶೆಟ್ಟಿ, ತರಬೇತುದಾರರಾಗಿ ಮಾನ್ಯ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಮಂಡಳಿಯ ಪೋಷಕ ಸತೀಶ್ ಪೂಜಾರಿ ಮಂಡಳಿಯ ಪ್ರಯಾಣಕ್ಕೆ ತೆಂಗಿನಕಾಯಿ ಒಡೆದು ಚಾಲನೆ ನೀಡಿದರು. ಪ್ರಮೋದ್ ಪೂಜಾರಿ ಸೂಳಬೆಟ್ಟು ಹಾಗೂ ಪೋಷಕರು ಉಪಸ್ಥಿತರಿದ್ದರು.