Site icon Suddi Belthangady

ಬೆಳ್ತಂಗಡಿ: ಎಸ್.ಕೆ.ಜಿ.ಐ. ಕೋ-ಆಪರೇಟಿವ್‌ ಸೊಸೈಟಿಯಿಂದ ಗ್ರಾಹಕರ ಸಮಾವೇಶ ಮತ್ತು ವೈದ್ಯಕೀಯ ತಪಾಸಣಾ ಶಿಬಿರ

ಬೆಳ್ತಂಗಡಿ: ಗ್ರಾಹಕರ ಜೀವನಕ್ಕೆ ಶಕ್ತಿ ತುಂಬುವ ಪ್ರಾಮಾಣಿಕ ಕೆಲಸವನ್ನು ಎಸ್.ಕೆ.ಜಿ.ಐ. ಕೋ-ಆಪರೇಟಿವ್ ಸೊಸೈಟಿ ಮಾಡುತ್ತಿದ್ದು ನೂರಾರು ಯುವಕರಿಗೆ ಉದ್ಯೋಗವನ್ನು ಕಲ್ಪಿಸಿಕೊಟ್ಟಿದೆ. ಆರ್ಥಿಕ ರಂಗದಲ್ಲಿ ಸಹಕಾರ ತತ್ವವನ್ನು ಬೆಳೆಸಿಕೊಂಡ ಅವಿಭಜಿತ ದ.ಕ. ಜಿಲ್ಲೆ ಆರ್ಥಿಕತೆಯ ತವರೂರು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅಭಿಪ್ರಾಯಪಟ್ಟರು.

ಅವರು ಅ.12ರಂದು ಲಾಯಿಲ ವಿಶ್ವಕರ್ಮ ಸಭಾಭವನದಲ್ಲಿ ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಮಂಗಳೂರು ಇದರ ಆಶ್ರಯದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸಂಸ್ಥೆಯ ವಜ್ರಮಹೋತ್ಸವ ಆಚರಣೆಯ ಪ್ರಯಕ್ತ ನಡೆದ ”ಗ್ರಾಹಕರ ಸಮಾವೇಶ ಮತ್ತು ವೈದ್ಯಕೀಯ ತಪಾಸಣಾ ಶಿಬಿರ”ದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಇಂದಿನ ಆಧುನಿಕತೆಯಲ್ಲಿ ಏನನ್ನು ಬೇಕಾದರೂ ಮಾಡಬಹುದು, ಆದರೆ 60 ವರ್ಷಗಳ ಹಿಂದೆ ಸಂಪರ್ಕದ ಕೊರತೆ, ಸಂಚಾರದ ಕೊರತೆ, ಆರ್ಥಿಕವಾಗಿರುವ ನಂಬಿಕೆಯ ಕೊರತೆಯ ನಡುವೆಯೂ ಸಂಸ್ಥೆಯನ್ನು ಪ್ರಾರಂಭ ಮಾಡುವ ಹಿರಿಯರ ದಿಟ್ಟ ಹೆಜ್ಜೆಯೇ ಇಂದು 60ರ ಸಂಭ್ರಮವನ್ನು ಪಡೆಯುವುದಕ್ಕೆ ಸಾಧ್ಯವಾಗಿದೆ ಎಂದರು.

ಕಳೆದ ಅವರುವತ್ತು ವರ್ಷಗಳಲ್ಲಿ ನಡೆದು ಬಂದ ಹಾದಿಯನ್ನು ಮತ್ತು ಪ್ರಸ್ತುತ ಸಂಸ್ಥೆ ವಜ್ರಮಹೋತ್ಸವ ದ ಪ್ರಯುಕ್ತ ಅವರುವತ್ತು ವಿಭಿನ್ನ ಕಾರ್ಯಕ್ರಮಗಳನ್ನು ಆಚರಿಸುತ್ತಿರುವ ವಿವರಗಳನ್ನು ಹಾಗೂ ಸಂಸ್ಥೆಯ ಆರ್ಥಿಕ ಅಭಿವೃದ್ಧಿಯ ಬಗ್ಗೆ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಶ್ರೀ ಯಜ್ಞೇಶ್ವರ ಇವರು ಪ್ರಸ್ತಾವಿಕವಾಗಿ ನುಡಿದರು.

ಎಸ್.ಕೆ.ಜಿ.ಐ. ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಪಿ. ಉಪೇಂದ್ರ ಆಚಾರ್ಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಸಿಬ್ಬಂದಿಗಳ ಪರಿಶ್ರಮ ಮತ್ತು ಸದಸ್ಯರ ಸಹಕಾರದಿಂದ ಸಂಸ್ಥೆಯ ಬೆಳವಣಿಗೆ ಸಾಧ್ಯವಾಗಿದ್ದು ಸಂಪಾದನೆಯ ಒಂದುಭಾಗವನ್ನು ಉಳಿತಾಯವನ್ನಾಗಿ ಇಟ್ಟುಕೊಳ್ಳಿ ಜೊತೆಗೆ ಆ ಪ್ರಜ್ಞೆಯನ್ನು ತಮ್ಮ ಮಕ್ಕಳಲ್ಲೂ ಬೆಳೆಸುವ ಪ್ರಯತ್ನವನ್ನು ಮಾಡಿ ಎಂದರು.

ವೇದಿಕೆಯಲ್ಲಿ ಮುರಳಿ ಬಲಿಪ, ವಕೀಲರು ಮತ್ತು ನೋಟರಿ ಪಬ್ಲಿಕ್, ಅಧ್ಯಕ್ಷರು, ಲಯನ್ಸ್ ಕ್ಲಬ್ ಬೆಳ್ತಂಗಡಿ, ವಿ. ಪ್ರಕಾಶ್ ಪುರೋಹಿತ್ ವೇಣೂರು ಅಧ್ಯಕ್ಷರು, ಆನೆಗುಂದಿ ಗುರುಸೇವಾ ಪರಿಷತ್‌,ಬೆಳ್ತಂಗಡಿ ಮಂಡಲ ಸಂಸ್ಥೆಯ ಉಪಾಧ್ಯಕ್ಷರಾದ ಎ. ಆನಂದ ಆಚಾರ್ಯ, ಹರಿಶ್ಚಂದ್ರ ಆಚಾರ್ಯ, ಪಿಲಿಚಾಮುಂಡಿಕಲ್ಲು ಶ್ರೀ ಗಣೇಶ್ ಗೋಲ್ಡ್ ಬೆಳ್ತಂಗಡಿ, ಆಶಾ ಸತೀಶ್ ಆಚಾರ್ಯ, ಹಂಸ ವುಡ್ ವರ್ಕ್ಸ್ ಬೆಳ್ತಂಗಡಿ, ಸದಾಶಿವ ಆಚಾರ್ಯ ಡಿ., ಹಿರಿಯ ಸದಸ್ಯರು ಶಕ್ತಿನಗರ, ಗುರುವಾಯನಕೆರೆ, ಡಾ. ರವಿಚಂದ್ರ ಕೆ., ಡಾ. ಪ್ರತೀಕ್, ಡಾ. ಜಯಂತ್ ಆಚಾರ್ಯ ಮಂಗಳೂರು, ಉಪಸ್ಥಿತರಿದ್ದರು.

ಉತ್ತಮ ಗ್ರಾಹಕರಾದ ಜಗದೀಶ್ ಆಚಾರ್ಯ, ಶಾಂತ, ಚಂದ್ರಯ್ಯ ಆಚಾರ್ಯ, ವಾಸು ಆಚಾರ್ಯ, ಸೀತಾರಾಮ ಆಚಾರ್ಯ, ರಮೇಶ್ ಆಚಾರ್ಯ, ಅವರಿಗೆ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪವರ್ ಮ್ಯಾನ್ ಗಣೇಶ್ ದೇವಾಡಿಗ ಅವರನ್ನು ಸನ್ಮಾನಿಸಲಾಯಿತು.

ಸಂಸ್ಥೆಯ ನಿರ್ದೇಶಕರಾದ ವಿ. ಜಯ ಆಚಾರ್, ಕೆ. ಪ್ರಕಾಶ್ ಆಚಾರ್ಯ, ಮಾರಾಟಾಧಿಕಾರಿ ಜಯಪ್ರಕಾಶ್ ಬಿ.ಎಸ್., ಗುರುವಾಯನಕೆರೆ ಶಾಖಾ ವ್ಯವಸ್ಥಾಪಕ ಪ್ರಶಾಂತ್ ಎಚ್. ಆಚಾರ್ಯ, ಸಿಬ್ಬಂದಿಗಳಾದ ಸುಶಾಂತ್, ಯಜ್ಞೇಶ್ ಮತ್ತು ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷರು ಮತ್ತು ಪ್ರಮುಖರುಗಳು ಉಪಸ್ಥಿತರಿದ್ದರು.

ಗಣೇಶ್ ಆಚಾರ್ಯ ಬಲ್ಯಯಕೋಡಿ ಸ್ವಾಗತಿಸಿದರು. ಶಾಖಾ ಸಿಬ್ಬಂದಿ ರಾಮ್ ಪ್ರಸಾದ್ ಎನ್.ಎಸ್ ನಿರೂಪಿಸಿದರು. ನಿರ್ದೇಶಕ ಮಂಜುನಾಥ ಆಚಾರ್ಯ ವಂದಿಸಿದರು.

Exit mobile version