Site icon Suddi Belthangady

ಕರಿಮಣಿ ಸರ ನಾಪತ್ತೆ

ಬೆಳ್ತಂಗಡಿ: ಖಾಸಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಕಣಿಯೂರು ಗ್ರಾಮದ ಕೇಶವ ಪೂಜಾರಿ ಎಂಬವರ ಪತ್ನಿ ಹರಿಣಾಕ್ಷಿ ಅವರ ಕರಿಮಣಿ ಸರ ಸಹಿತ ಅಗತ್ಯ ವಸ್ತುಗಳು ಕಳೆದುಹೋದ ಘಟನೆ ವರದಿಯಾಗಿದೆ. ಉಪ್ಪಿನಂಗಡಿ-ಬೆಳ್ತಂಗಡಿ ನಡುವಿನ ಖಾಸಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಹರಿಣಾಕ್ಷಿ ಅವರು ಕುಪ್ಪೆಟ್ಟಿಯಲ್ಲಿ ಬಸ್‌ನಿಂದ ಇಳಿದಿದ್ದಾರೆ. ಈ ವೇಳೆ ಅವರ 4 ಪವನ್ ಕರಿಮಣಿ, 2250ರೂ ನಗದು, ರಶೀದಿ ಸಹಿತ ಅಗತ್ಯ ವಸ್ತುಗಳು ಕಳೆದುಹೋಗಿದೆ. ಸಿಕ್ಕಿದವರು 8296215260 ಸಂಖ್ಯೆಯನ್ನು ಸಂಪರ್ಕಿಸುವಂತೆ ಅವರು ವಿನಂತಿಸಿದ್ದಾರೆ.

Exit mobile version