Site icon Suddi Belthangady

ಕುಕ್ಕೇಡಿ: ಬುಳೆಕ್ಕಾರ ಶ್ರೀ ಶಾರದಾಂಬ ಭಜನಾ ಮಂಡಳಿ ಪದಾಧಿಕಾರಿಗಳ ಆಯ್ಕೆ

ಕುಕ್ಕೇಡಿ: ಬುಳೆಕ್ಕಾರ ಶಾರದನಗರ ಶ್ರೀ ಶಾರದಾಂಭ ಭಜನಾ ಮಂಡಳಿಯಿಂದ ಶಾರದ ಪೂಜೋತ್ಸವ ಹಾಗೂ ಆಯುಧ ಪೂಜೆ ಭಜನಾ ಮಂದಿರದಲ್ಲಿ ನಡೆಯಿತು. ಮಹಿಳಾ ಮಂಡಳಿ ಮಹಾಸಭೆ ಜರಗಿತು. ಗ್ರಾಮ ಪಂಚಾಯಿತ್ ಸದಸ್ಯ ಹಾಗೂ ಮಂಡಳಿಯ ಕಾರ್ಯಾಧ್ಯಕ್ಷ ಗೋಪಾಲ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಜರಗಿತು.

ವೇದಿಕೆಯಲ್ಲಿ ವಿಶ್ವನಾಥ್ ದೇವಾಡಿಗ, ನಾರಾಯಣ ನಾಯ್ಕ, ಮಹಿಳಾ ಸಮಿತಿ ಅಧ್ಯಕ್ಷೆ ಪವಿತ್ರ ಕಮಲಾಕ್ಷ ದರ್ಬೆ ಉಪಸ್ಥಿತರಿದ್ದರು. ಬಳಿಕ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಶಶಿಕಲಾ ಜಗದೀಶ್ ದರ್ಬೆ, ಕಾರ್ಯದರ್ಶಿಯಾಗಿ ತೃಪ್ತಿ ಕೆಂಗಾಜೆ, ಜೊತೆ ಕಾರ್ಯದರ್ಶಿಯಾಗಿ ಪೃಥ್ವಿ ವಿ. ಎಸ್. ದೇವಾಡಿಗ ಬುಳೆಕ್ಕಾರ, ಉಪಾಧ್ಯಕ್ಷರಾಗಿ ವಿನೋದ ರತ್ನಾಕರ್ ಪಾದೆ, ಸುನಂದ ಶಿವರಾಂ ಶೆಟ್ಟಿ ಪಾಪುದಡ್ಕ, ಮತ್ತು ಇತರ 25 ಮಹಿಳಾ ಸದಸ್ಯರನ್ನು ಆಯ್ಕೆ ಮಾಡಲಾಯಿತು. ನವೀನ್ ಜಿ. ಸ್ವಾಗತಿಸಿದರು. ಜಗದೀಶ್ ದರ್ಬೆ ಕಾರ್ಯಕ್ರಮ ನಿರೂಪಿಸಿದರು. ಪ್ರವೀಣ್ ಕೊಪ್ಪಳ ಧನ್ಯವಾದವಿತ್ತರು.

Exit mobile version