ಬೆಳ್ತಂಗಡಿ: ಕುವೆಟ್ಟು ಗ್ರಾಮದ ಶಕ್ತಿನಗರ ಸರ್ಕಲ್ ನಲ್ಲಿ ಎರಡು ಲಕ್ಷ ಮೌಲ್ಯದ ಚಿನ್ನದ ಬ್ರೇಸ್ ಲೆಟ್ ಕಳೆದುಕೊಂಡಿದ್ದ ದಂಪತಿಗೆ, ಕುವೆಟ್ಟು ಗ್ರಾಮದ ಬದ್ಯಾರ್ ನಿವಾಸಿ ಸಲೀಂ ಎಂಬವರ ಪುತ್ರ ಝೈನುದ್ದೀನ್ ಅವರು ಮರಳಿಸಿ ಪ್ರಾಮಾಣಿಕ ಮೆರೆದಿದ್ದಾರೆ.
ರಿಕ್ಷಾ ಚಾಲಕರಾಗಿರುವ ಅವರಿಗೆ ಈ ಆಭರಣ ಸಿಕ್ಕಿತ್ತು. ಇದಾದ ಕೆಲವೇ ಹೊತ್ತಿನಲ್ಲಿ ಸ್ಥಳೀಯವಾಗಿ ಹಲವರ ಮೊಬೈಲ್ ಸ್ಟೇಟಸ್ ನಲ್ಲಿ ಈ ಚಿನ್ನ ಕಳೆದುಹೋಗಿರುವ ಬಗ್ಗೆ ಸಂದೇಶಗಳು ಹರಿದಾಡುತ್ತಿತ್ತು. ಅದನ್ನು ಗಮನಿಸಿದ ತಕ್ಷಣ ಆ ನಂಬರ್ ಗೆ ಕರೆ ಮಾಡಿದಾಗ ಅದು ಸಿದ್ದೀಕ್ ಎಂಬವರ ಪತ್ನಿ ಫರ್ಝಾನ ಅವರು ಬದ್ಯಾರ್ ನ ತಾಯಿ ಮನೆಯಿಂದ ಪತಿಯ ಮನೆ ಮಲೆಬೆಟ್ಟುವಿಗೆ ಹೋಗುವ ವೇಳೆ ಕಳೆದುಕೊಂಡಿದ್ದೆಂದು ಖಚಿತಪಡಿಸಿ ಅವರಿಗೆ ಈ ಆಭರಣವನ್ನು ಹಸ್ತಾಂತರಿಸಿದರು.
ಝೈನುದ್ದೀನ್ ಅವರ ಈ ಪ್ರಾಮಣಿಕತೆಯನ್ನು ಮೆಚ್ಚಿ ಸಿದ್ದೀಕ್ ಅವರು ಝೈನುದ್ದೀನ್ ಅವರನ್ನು ಶಾಲು ಹೊದಿಸಿ ಸನ್ಮಾನಿಸಿ, ನಗದು ಪುರಸ್ಕಾರ ನೀಡಿ ಗೌರವಿಸಿದರು. ಕಾಂಗ್ರೆಸ್ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಯು.ಕೆ. ಮಹಮ್ಮದ್ ಹನೀಫ್ ಉಜಿರೆ, ನಗರ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಮೊಹಮ್ಮದ್ ಶಾಫಿ ಕಾಶಿಪಟ್ಣ ಉಪಸ್ಥಿತರಿದ್ದರು.