Site icon Suddi Belthangady

ಬೆಳಾಲು: ಅನಂತೋಡಿ ಅನಂತ ಪದ್ಮನಾಭಾ ದೇವಸ್ಥಾನದ ಜಾತ್ರೆ ಸಮಾಲೋಚನಾ ಸಭೆ

ಬೆಳಾಲು: ಶ್ರೀ ಅನಂತಪದ್ಮನಾಭ ದೇವಸ್ಥಾನ ಅನಂತೋಡಿಯಲ್ಲಿ ಡಿ. 24, 25ರಂದು ನಡೆಯುವ ವಾರ್ಷಿಕ ಜಾತ್ರಮಹೋತ್ಸವ ಹಾಗೂ ಪರಿವಾರ ದೈವಗಳ ನರ್ತನ ಸೇವೆಯ ಬಗ್ಗೆ ಪೂರ್ವಭಾವಿ ಸಭೆ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಶ್ರೀನಿವಾಸ್ ಗೌಡ ಶ್ರೀಸೌಧ ಬೆಳಾಲು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

2025-26ನೇ ಸಾಲಿನ ಜಾತ್ರಮಹೋತ್ಸವದ ಪ್ರಧಾನ ಸಂಚಾಲಕ ಲಿಂಗಪ್ಪ ಪೂಜಾರಿ ಬನಂದೂರು ಅವರನ್ನು ಆಯ್ಕೆಮಾಡಲಾಯಿತು. ಜಾತ್ರೋತ್ಸವ ಸಮಿತಿಗೆ ವಿವಿಧ ಉಪಸಮಿತಿಗಳನ್ನು ಆಯ್ಕೆ ಮಾಡಲಾಯಿತು. ವೇದಿಕೆಯಲ್ಲಿ ದೇವಸ್ಥಾನದ ಅಸ್ರಣ್ಣ ಗಿರೀಶ್ ಬಾರಿತ್ತಾಯ ಪಾರಲ, ವ್ಯವಸ್ಥಾಪನ ಸಮಿತಿಯ ಉಪಾಧ್ಯಕ್ಷೆ ಮಮತಾ ದಿನೇಶ್ ಪೂಜಾರಿ ಉಪ್ಪಾರು, ವ್ಯವಸ್ಥಾಪನ ಸಮಿತಿಯ ಪ್ರಧಾನ ಕಾರ್ಯದರ್ಶಿ ದುರ್ಗಾಪ್ರಸಾದ್ ಕೇರ್ಮುನ್ನಾಯ, ಮಹಿಳಾ ಸಮಿತಿಯ ಅಧ್ಯಕ್ಷೆ ಹೇಮಲತಾ ಶ್ರೀನಿವಾಸ್ ಗೌಡ, ಅನಂತೇಶ್ವರ ಭಜನಾ ಮಂಡಳಿಯ ಅಧ್ಯಕ್ಷ ಹರೀಶ್ ಪೂಜಾರಿ ಪೋಸೊಟ್ಟು, ಮಹಿಳಾ ಸಮಿತಿಯ ಗೌರವಾಧ್ಯಕ್ಷೆ ವಿದ್ಯಾ ಶ್ರೀನಿವಾಸ ಗೌಡ ಬೆಳಾಲು, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಶಿವಕುಮಾರ ಬಾರಿತ್ತಾಯ, ವ್ಯವಸ್ಥಾಪನ ಸಮಿತಿಯ ಲೆಕ್ಕಪರಿಶೋಧಕ ನಾರಾಯಣ ಗೌಡ ಎಳ್ಳುಗದ್ದೆ ಮತ್ತು ಬೈಲುವಾರು ಸಮಿತಿಯ ಸಂಚಾಲಕರು, ಸಹಸಂಚಾಲಕರು ಮತ್ತು ಸದಸ್ಯರು, ಮಹಿಳಾ ಸಮಿತಿಯ ಸದಸ್ಯರು, ಭಜನಾ ಮಂಡಳಿಯ ಸದಸ್ಯರು, ಅನಂತೇಶ್ವರ ಫ್ರೆಂಡ್ಸ್ ಇದರ ಸದಸ್ಯರು ಮತ್ತು ಊರ ಭಕ್ತಾಧಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ವ್ಯವಸ್ಥಾಪನ ಸಮಿತಿಯ ಜತೆ ಕಾರ್ಯದರ್ಶಿ ಸತೀಶ್ ಗೌಡ ಎಳ್ಳುಗದ್ದೆ ಸ್ವಾಗತಿಸಿ, ದೇವಸ್ಥಾನದ ಮೇಲ್ವಿಚಾರಕ ಕೆ.ಶಿವಪ್ರಸಾದ್ ಗೊಲ್ಲ ವಂದಿಸಿದರು.

Exit mobile version