ಪದ್ಮುಂಜ: ರಾಷ್ಟ್ರೀಯ ಗೋಕುಲ್ ಮಿಷನ್ ಯೋಜನೆ, ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ ದ.ಕ. ಹಾಲು ಉತ್ಪಾದಕರ ಒಕ್ಕೂಟದ ಆಶ್ರಯದಲ್ಲಿ ಪದ್ಮುಂಜ ಹಾಲು ಉತ್ಪಾದಕರ ಸಹಕಾರ ಸಂಘದ ನೇತೃತ್ವದಲ್ಲಿ ರಾಸುಗಳ ಭ್ರೂಣ ವರ್ಗಾವಣೆ ಕಾರ್ಯಕ್ರಮ ಸಂಘದ ನಿರ್ದೇಶಕ ರಾಜೇಶ್ ಜೈನ್ ಅಡೆಂಜ ಅವರ ಮನೆಯಲ್ಲಿ ಅ.12ರಂದು ನಡೆಯಿತು.
ಕಾರ್ಯಕ್ರಮ ಉದ್ಘಾಟನೆಯನ್ನು ಪದ್ಮುಂಜ ಸಿ.ಎ ಬ್ಯಾಂಕ್ ನಿವೃತ್ತ ಮ್ಯಾನೇಜರ್ ರಘುಪತಿ ಭಟ್ ಅನಾಬೆ ನೆರವೇರಿಸಿದರು.
ಡಾ| ಜಿತೇಂದ್ರ ಪ್ರಸಾದ್, ಡಾ| ರಾಜ್ ಕುಮಾರ್, ಡಾ| ಶುಭಂ ಅವರ ನೇತೃತ್ವದಲ್ಲಿ 9 ರಾಸುಗಳಿಗೆ ಭ್ರೂಣ ವರ್ಗಾವಣೆ ಮಾಡಲಾಯಿತು.
ಎಂ. ಜಯರಾಮ್ ಶೆಟ್ಟಿ ಸಹಕರಿಸಿದರು. ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಪುರುಷೋತ್ತಮ, ಉಪಾಧ್ಯಕ್ಷ ಉಮೇಶ್ ಗೌಡ, ನಿರ್ದೇಶಕರಾದ ಉಮೇಶ್, ರಮಾನಂದ ಸುನೀಲ್ ಕುಮಾರ್, ಪುರುಷೋತ್ತಮ ಗೌಡ, ಕೃಷ್ಣ ನಾಯ್ಕ, ಶಾರದಾ, ಪ್ರತಿಮಾ, ಸಂಘದ ಪ್ರಭಾರ ಕಾರ್ಯದರ್ಶಿ ಸತೀಶ್ ಕುಮಾರ್ ಹಾಗೂ ಸಂಘದ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.