ನಡ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ವರ್ಷಾಚಾರಣೆಯ ಪ್ರಯುಕ್ತ ಉಜಿರೆ ಬೆನಕ ಹೆಲ್ತ್ ಸೆಂಟರ್ ನ ವಿಶೇಷ ಸಹಕಾರದೊಂದಿಗೆ ಸುಳ್ಯ ಕೆ.ವಿ.ಜಿ. ದಂತ ಮಹಾವಿದ್ಯಾಲಯ, ಪುತ್ತೂರು ಭಾರತೀಯ ದಂತ ವೈದ್ಯರ ಸಂಘ, ಲಾಯಿಲ ಪ್ರಸನ್ನ ಕಾಲೇಜು ಮತ್ತು ಆಸ್ಪತ್ರೆ, ಮಂಗಳೂರು ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಶಾಲಿಟಿ ಕಣ್ಣಿನ ಆಸ್ಪತ್ರೆ, ಬೆಳ್ತಂಗಡಿ ರೋಟರಿ ಕ್ಲಬ್, ಕಳೆಂಜ ನಂದಗೋಕುಲ ಗೋಶಾಲೆ, ಬೆಳ್ತಂಗಡಿ ಲಯನ್ಸ್ ಕ್ಲಬ್, ಬೆಳ್ತಂಗಡಿ ಆಯುಷ್ ಫೆಡರೇಷನ್ ಆಫ್ ಇಂಡಿಯಾ ಸಹಭಾಗಿತ್ವದಲ್ಲಿ ಬೃಹತ್ ಉಚಿತ ಅರೋಗ್ಯ ತಪಾಸಣಾ ಶಿಬಿರ ನಡೆಯಿತು.
ಬೆನಕ ಹೆಲ್ತ್ ಸೆಂಟರ್ ಆಡಳಿತ ನಿರ್ದೇಶಕ ಡಾ. ಗೋಪಾಲಕೃಷ್ಣ ಭಟ್ ಉದ್ಘಾಟನೆ ನೆರವೇರಿಸಿದರು. ಮಂಗಳೂರು ವಿದ್ಯುಚಕ್ತಿ ನಿಗಮದ ಅಧ್ಯಕ್ಷ ಹರೀಶ್ ಕುಮಾರ್ ಸಭಾಧ್ಯಕ್ಷತೆ ವಹಿಸಿದರು. ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಮುರಳಿ ಬಲಿಪ, ಬೆಳ್ತಂಗಡಿ ರೋಟರಿ ಕ್ಲಬ್ ಕಾರ್ಯದರ್ಶಿ ಡಾ. ಎಂ. ಎಂ. ದಯಾಕರ್, IDA ಪುತ್ತೂರು ಅಧ್ಯಕ್ಷೆ ಡಾ. ಆಶಾ ಪಿದಮಲೆ, ಅರೋಗ್ಯ ಕ್ಲಿನಿಕ್ ನಾವೂರು ವೈದ್ಯ ಡಾ. ಪ್ರದೀಪ್ ಎ., ನಡ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷ ಜಯ ಶೆಟ್ಟಿ, ಪಡ್ಪು ಮಿಲ್ಕ್ ಸೊಸೈಟಿ ಅಧ್ಯಕ್ಷ ಪ್ರವೀಣ್ ವಿ. ಜಿ., ರಝ ಫ್ರೆಂಡ್ಸ್ ಅಸೋಸಿಯೇಷನ್ ಅಧ್ಯಕ್ಷ ಇರ್ಫಾನ್ ಸಾಹೇಬ್, ಡಾ. ಪ್ರಶಾಂತ್, ಇಂದಬೆಟ್ಟು PHC ಶುಶ್ರುಷಕ ಅಧಿಕಾರಿ ಸುಭಾಷಿನಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಜನಾರ್ಧನ ನಾಯ್ಕ, ಹಳೇವಿದ್ಯಾರ್ಥಿ ಸಂಘದ ಅಧ್ಯಕ್ಷ ಧರನೇಂದ್ರ ಕುಮಾರ್, ಶಾಲಾ ಮುಖ್ಯ ಶಿಕ್ಷಕಿ ಪುಷ್ಪಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಬಿರದಲ್ಲಿ ಶಸ್ತ್ರ ಚಿಕಿತ್ಸ ತಜ್ಞ ಡಾ. ವಿಜೇತ್ ರೈ, ತುರ್ತು ಚಿಕಿತ್ಸಾ ತಜ್ಞ ಡಾ. ಆದಿತ್ಯ ರಾವ್, ಸ್ತ್ರೀ ರೋಗ ತಜ್ಞೆ ಡಾ. ಅಂಕಿತ ಜಿ. ಭಟ್, ಎಲುಬು ತಜ್ಞ ಡಾ. ರೋಹಿತ್ ಭಟ್, ಮಕ್ಕಳ ತಜ್ಞ ಡಾ. ಸೂರಜ್ ಶೆಟ್ಟಿ,ಆಯುರ್ವೇದ ತಜ್ಞೆ ಡಾ. ಕವಿತಾ ಪ್ರದೀಪ್, ಪಂಚಕರ್ಮ ಚಿಕಿತ್ಸಾ ತಜ್ಞೆ ಡಾ. ವಿದ್ಯಾ ಪಡ್ವೇಟ್ನಾಯ ಹಾಗೂ ಹಲವು ವೈದ್ಯರು ಪಾಲ್ಗೊಂಡಿದ್ದರು. ಶಿಬಿರದಲ್ಲಿ ಹೃದಯ ತಪಾಸಣೆ ಸಹಿತ ಹಲ್ಲಿನ, ಕಣ್ಣಿನ ಹಾಗೂ ಇನ್ನಿತರು ಚಿಕಿತ್ಸೆಗಳು ಲಭ್ಯವಿದ್ದವು. 378 ಜನರು ಶಿಬಿರದ ಪ್ರಯೋಜನ ಪಡೆದುಕೊಂಡರು.
ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ ಮುನಿರಾಜ ಅಜ್ರಿ ಪ್ರಸ್ತಾವನೆಗೈದರು. ಪ್ರಧಾನ ಕಾರ್ಯದರ್ಶಿ ವಸಂತ ಶೆಟ್ಟಿ ಶ್ರದ್ದಾ ಸ್ವಾಗತಿಸಿದರು. ಕಾರ್ಯಧ್ಯಕ್ಷ ಶಶಿಕಿರಣ್ ಜೈನ್, ಕೋಶಾಧಿಕಾರಿ ಹಬೀಬ್ ಸಾಹೇಬ್ ಸಹಕರಿಸಿದರು. ಶಿಕ್ಷಕಿ ಸುಜಾತ ನಿರ್ವಹಿಸಿದರು. ಜಯಂತ್ ಗೌಡ ವಂದಿಸಿದರು.