ಬೆಳ್ತಂಗಡಿ: ಉತ್ತರ ಭಾರತದ ಪ್ರವಾಸ ದಲ್ಲಿರುವ ಕನ್ಯಾಡಿ ಶ್ರೀರಾಮ ಕ್ಷೇತ್ರದ ಪೀಠಾಧೀಶ ಮಹಾ ಮಂಡಲೇಶ್ವರ 1008 ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮಿಜಿಯವರು ಅ. 13ರಂದು ಅಯೋದ್ಯೆ ಶ್ರವಣಧಾಮಕ್ಕೆ ಭೇಟಿ ನೀಡಿದರು.
ರಾಮಾಯಣ ಕಾಲದ ಶ್ರವಣ ಕುಮಾರನ ಚರಿತ್ರೆಯಲ್ಲಿ ಕುರುಡರಾದ ವೃದ್ಧ ತಂದೆ ತಾಯಿಯನ್ನು ತಕ್ಕಡಿಯಲ್ಲಿ ಕೂರಿಸಿ ತನ್ನ ಭುಜದ ಮೇಲೆ ಹೊತ್ತುಕೊಂಡು ಅಯೋಧ್ಯೆಯಿಂದ ಸುಮಾರು ಐವತ್ತು ಕಿಲೋಮೀಟರ್ ದೂರದ ಒಂದು ಜಾಗದಲ್ಲಿ ಕುಳ್ಳಿರಿಸಿ ಅವರಿಗೆ ಬಾಯಾರಿಕೆಗಾಗಿ ನೀರು ತರಲು ಹೋದ ಸಂದರ್ಭದಲ್ಲಿ ನೀರು ಬಿಂದಿಗೆಗೆ ತುಂಬಿಸುವ ಶಬ್ದ ಬಂದಾಗ ಜಿಂಕೆ ಒಂದು ನೀರು ಕುಡಿಯಲು ಬಂದಿದೆ ಎಂದು ತಿಳಿದ ಚಕ್ರವರ್ತಿ ಮಹಾರಾಜ ದಶರಥನು ಶಬ್ದವೇದಿ ಬಾಣ ಪ್ರಯೋಗಿಸಿದಾಗ ಶ್ರವಣ ಕುಮಾರನ ಹತ್ಯೆಯಾಗುತ್ತದೆ.
ಶ್ರವಣಕುಮಾರನ ತಂದೆ ತಾಯಿಗಳು ದಶರಥ ಮಹಾರಾಜರಿಗೆ ಶಾಪ ಕೊಟ್ಟಂತ ಸ್ಥಳ ಇಂದು ಶ್ರವಣಧಾಮ ಎಂಬ ಹೆಸರಿನಿಂದ ಬಹುದೊಡ್ಡ ಪುಣ್ಯಕ್ಷೇತ್ರವಾಗಿದೆ. ಈ ಕ್ಷೇತ್ರಕ್ಕೆ ತಮ್ಮ ಶಿಷ್ಯ ಪರಿವಾರದೊಂದಿಗೆ ಹೋಗಿ ಕ್ಷೇತ್ರ ದರ್ಶನ ಮಾಡಿದರು.