ಗುರುವಾಯನಕೆರೆ: ಮೊಬೈಲ್ ಮಾರಾಟ ಹಾಗೂ ಸರ್ವಿಸ್‌ನಲ್ಲಿ ಹೆಸರುವಾಸಿಯಾಗಿರುವ ಪಪ್ಪು ಮೊಬೈಲ್ಸ್ ನ ನೂತನ ಎರಡನೇ ಮಳಿಗೆಯು ಗುರುವಾಯನಕೆರೆಯ ನ್ಯೂಸಿಟಿ ಎಲೆಕ್ಟ್ರಾನಿಕ್ಸ್ ಮುಂಭಾಗದಲ್ಲಿರುವ ವಿ.ಎಲ್.ಆರ್.ಎಸ್. ಕಾಂಪ್ಲೆಕ್ಸ್ ನಲ್ಲಿ ಅ.13ರಂದು ಶುಭಾರಂಭಗೊಂಡಿತು.
ನೂತನ ಮಳಿಗೆಯನ್ನು ಬೆಳ್ತಂಗಡಿ ಕೋರ್ಟ್ ರಸ್ತೆಯ ಅನಾಫಿ ಮಸೀದಿಯ ಧರ್ಮಗುರುಗಳು ಪ್ರಾರ್ಥನೆ ನೆರವೇರಿಸಿ ಉದ್ಘಾಟಿಸಿದರು.
ಪಪ್ಪು ಜನರೇಟರ್ಸ್ & ಮಿಲ್ಲರ್ಸ್ ನ ಮಾಲಕ ಮಹಮ್ಮದ್ ಶಮೀರ್, ಪಪ್ಪು ಸೌಂಡ್ಸ್ ಆ್ಯಂಡ್ ಲೈಟಿಂಗ್ಸ್ ನ ಮಾಲಕ ಮಹಮ್ಮದ್ ಶಬೀರ್, ನ್ಯೂ ಸಿಟಿ ಎಲೆಕ್ಟ್ರಾನಿಕ್ಸ್ ನ ಮಾಲಕ ಲೋಕೇಶ್, ಆರ್‌ಆರ್ ಗಾರ್ಮೆಂಟ್ಸ್ ನ ಮಾಲಕ ಝಾಹಿದ್, ಅಯಾನ್ಶ್ ಮೊಬೈಲ್ಸ್ ನ ಮಾಲಕ ಅರಿಹಂತ್ ಜೈನ್, ಅಬ್ದುಲ್ ರಹಿಮಾನ್, ಶಿವರಾಂ, ಕುಟುಂಬಸ್ಥರು ಹಾಗೂ ಗ್ರಾಹಕರು ಉಪಸ್ಥಿತರಿದ್ದರು.
ನೂತನ ಮಳಿಗೆಯಲ್ಲಿ ಎಲ್ಲಾ ಕಂಪೆನಿಗಳ ಸ್ಮಾರ್ಟ್ಫೋನ್ ಖರೀದಿಗೆ ಹಾಗೂ ಸರ್ವಿಸ್‌ಗೆ ಅವಕಾಶ ಮಾಡಿಕೊಡಲಾಗಿದ್ದು ಮೊಬೈಲ್ ಬಿಡಿಭಾಗಗಳ ಮಾರಾಟದ ಮೇಲೆಯೂ ಭಾರಿ ದರ ಕಡಿತ ಸೇವೆ ದೊರೆಯಲಿದೆ ಎಂದು ಪಪ್ಪು ಮೊಬೈಲ್ಸ್ ನ ಮಾಲಕ ಮಹಮ್ಮದ್ ಶರೀಫ್ ತಿಳಿಸಿದ್ದಾರೆ.