Site icon Suddi Belthangady

ಕಥೋಲಿಕ್ ಸಭಾದಿಂದ ರಾಜಕೀಯ ಜಾಗೃತಿ ಸಮಾವೇಶ

ಬೆಳ್ತಂಗಡಿ: ವಲಯ ಪಾಲನ ಮಂಡಳಿ ಮತ್ತು ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ ಮೇಲುಸ್ತುವಾರಿಯಲ್ಲಿ ರಾಜಕೀಯ ಜಾಗೃತಿ ಸಮಾವೇಶ ಅ. 12ರಂದು ಸಂಜೆ 3 ಗಂಟೆಗೆ ಬೆಳ್ತಂಗಡಿ ಚರ್ಚಿನ ಇಂಗ್ಲೀಷ್ ಮಿಡಿಯಂ ಶಾಲೆಯ ಹೋಲ್ ನಲ್ಲಿ ನಡೆಯಿತು.

ಬೆಳ್ತಂಗಡಿ ಚರ್ಚಿನ ಧರ್ಮಗುರು ಫಾ. ವಾಲ್ಟರ್ ಡಿಮೆಲ್ಲೋ ಅವರ ಅನುಪಸ್ಥಿತಿಯಲ್ಲಿ ಈ ರಾಜಕೀಯ ಜಾಗೃತಿ ಕಾರ್ಯಕ್ರಮವನ್ನು ಮಡಂತ್ಯಾರು ಚರ್ಚಿನ ಧರ್ಮಗುರು ಫಾ. ಸ್ಟೇನಿ ಗೋವಿಯಸ್ ಅವರು ಚಾಲನೆ ಕೊಟ್ಟರು.

ರಾಜಕೀಯ ಜಾಗೃತಿಯ ಪ್ರಮುಖ ಸಂವಸ್ಮೂಲ ವ್ಯಕ್ತಿ ವಿಲ್ಫ್ರೆಡ್ ಡಿಸೋಜ ಉಪ್ಪಿನಂಗಡಿ ಅವರಿಗೆ ಮಡಂತ್ಯಾರು ಚರ್ಚಿನ ಧರ್ಮಗುರು ಫಾ.ಸ್ಟೇನಿ ಗೋವಿಯಸ್ ರವರು ಹೂಗುಚ್ಚ ನೀಡಿ ಸ್ವಾಗತಿಸಿದರು. ಕಥೋಲಿಕ್ ಸಭಾ ಕೇಂದ್ರಿಯ ಅಧ್ಯಕ್ಷ ಶ್ರೀಮಾನ್ ಸಂತೋಷ್ ಡಿಸೋಜ ಅವರಿಗೆ ಮಡಂತ್ಯಾರು ಚರ್ಚಿನ ಧರ್ಮಗುರು ಫಾ. ಸ್ಟೇನಿ ಗೋವಿಯಸ್ ಅವರು ಶಾಲ್ ಹೊದಿಸಿ ಹೂಗುಚ್ಚ ನೀಡಿ ಸ್ವಾಗತಿಸಿದರು. ಕಥೋಲಿಕ್ ಸಭಾ ಕೇಂದ್ರಿಯ ರಾಜಕೀಯ ಸಂಚಾಲಕ ಸ್ಟ್ಯಾನಿ ಲೋಬೋ, ಕಥೊಲಿಕ್ ಸಭಾ ಬೆಳ್ತಂಗಡಿ ವಲಯದ ಅಧ್ಯಕ್ಷ ಅಲ್ಬರ್ಟ್ ಸುನಿಲ್ ಮೋನಿಸ್, ಬೆಳ್ತಂಗಡಿ ವಲಯದ ಮಡಂತ್ಯಾರು ಚರ್ಚಿನ ಪಾಲನ ಮಂಡಳಿಯ ಕಾರ್ಯದರ್ಶಿ ಜೇರಾಲ್ಡ್ ಮೋರಾಸ್, ಬೆಳ್ತಂಗಡಿ ಚರ್ಚಿನ ಪಾಲನ ಮಂಡಳಿಯ ಉಪಾಧ್ಯಾಕ್ಷ ವಾಲ್ಟರ್ ಮೋನಿಸ್, ಬೆಳ್ತಂಗಡಿ ಕಥೊಲಿಕ್ ಸಭಾ ಘಟಕದ ಅಧ್ಯಕ್ಷ ಗಿಲ್ಬರ್ಟ್ ಪಿಂಟೋ ಮತ್ತು ಬೆಳ್ತಂಗಡಿ ಕಥೊಲಿಕ್ ಸಭಾ ವಲಯದ ರಾಜಕೀಯ ಸಂಚಾಲಕ ವಿನ್ಸೆಂಟ್ ಡಿಸೋಜ ವೇದಿಕೆಯಲ್ಲಿ ಹಾಜರಿದ್ದರು.

ವಿನ್ಸೆಂಟ್ ಡಿಸೋಜ ಅವರು ಸಂಪನ್ಮೂಲ ವ್ಯಕ್ತಿಯವರ ಪರಿಚಯವನ್ನು ಮಾಡಿದರು. ಫಾ. ಸ್ಟೇನಿ ಗೋವಿಯಸ್ ಅವರು ರಾಜಕೀಯ ಜಾಗೃತಿಗೆ ಬಂದ ಎಲ್ಲಾರಿಗೂ ಉತ್ತಮ ಸಂದೇಶ ಕೊಟ್ಟರು.

ಈ ರಾಜಕೀಯ ಜಾಗೃತಿ ಸಮಾವೇಶಕ್ಕೆ ಬೆಳ್ತಂಗಡಿ ವಲಯದ ಚರ್ಚ್ ಗಳ ಗುರುಗಳು, ಧರ್ಮ ಭಗಿಣಿಯರು, ಮಾಜಿ ಕೇಂದ್ರಿಯ ಅಧ್ಯಕ್ಷರು, ಮಾಜಿ ವಲಯ ಅಧ್ಯಕ್ಷರು, ಕೇಂದ್ರಿಯ ಉಪಾಧ್ಯಾಕ್ಷರು ಸೇರಿ ಸರಿ ಸುಮಾರು 120ಕ್ಕಿಂತ ಹೆಚ್ಚು ಸದಸ್ಯರು ಭಾಗವಹಿಸಿದ್ದರು.

ಬೆಳ್ತಂಗಡಿ ವಲಯದ ಮಡಂತ್ಯಾರು ಚರ್ಚಿನ ಕಾರ್ಯದರ್ಶಿ ಜೇರಾಲ್ಡ್ ಮೋರಾಸ್ ಸ್ವಾಗತಿಸಿದರು. ಬೆಳ್ತಂಗಡಿ ಪಾಲನ ಮಂಡಳಿಯ ಉಪಾಧ್ಯಕ್ಷ ವಾಲ್ಟರ್ ಮೋನಿಸ್ ಕಾರ್ಯಕ್ರಮವನ್ನು ನಿರೂಪಿಸಿದರು.
ಬೆಳ್ತಂಗಡಿ ವಲಯದ ಕಥೊಲಿಕ್ ಸಭಾ ಅಧ್ಯಕ್ಷ ಅಲ್ಬರ್ಟ್ ಸುನಿಲ್ ಮೋನಿಸ್ ಧನ್ಯವಾದವನ್ನು ಆರ್ಪಿಸಿದರು.

Exit mobile version