
ಬೆಳ್ತಂಗಡಿ : ಬಂಟರ ಯಾನೆ ನಾಡವರ ಸಂಘ(ರಿ.), ಬೆಳ್ತಂಗಡಿ, ಬಂಟರ ಮಹಿಳಾ ವಿಭಾಗ ಹಾಗೂ ಬಂಟರ ಯುವ ವಿಭಾಗ ಇದರ ಸಹಭಾಗಿತ್ವದಲ್ಲಿ ನ. 01 ರಂದು ಗುರುವಾಯನಕೆರೆ ಬಂಟರ ಭವನದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ‘ತುಡರ್ ಪರ್ಬ’ ಕಾರ್ಯಕ್ರಮ ನಡೆಯಲಿದೆ. ಇದರ ಆಮಂತ್ರಣ ಪತ್ರಿಕೆಯನ್ನು ಬಂಟರ ಭವನದಲ್ಲಿ ಅ. 12 ರಂದು ತಾಲೂಕು ಬಂಟರ ಸಂಘದ ಪೂರ್ವಾಧ್ಯಕ್ಷ ರಘುರಾಮ್ ಗಾಂಭೀರ ಬಿಡುಗಡೆ ಮಾಡಿದರು.
ಈ ವೇಳೆ ಬಂಟರ ಯಾನೆ ನಾಡವರ ಸಂಘದ ಉಪಾಧ್ಯಕ್ಷ ನವೀನ್ ಸಾಮಾನಿ ಕರಂಬಾರು ಬೀಡು, ಕಾರ್ಯದರ್ಶಿ ಸುರೇಶ್ ಕುಮಾರ್ ಲಾಯಿಲ, ನಿಕಟ ಪೂರ್ವ ಅಧ್ಯಕ್ಷ ಜಯರಾಮ್ ಶೆಟ್ಟಿ ಮುಂಡಾಡಿ ಗುತ್ತು, ಗುರುವಾಯನಕೆರೆ ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಅಜಿತ್ ಕುಮಾರ್ ಶೆಟ್ಟಿ, ಮಾತೃ ಸಂಘದ ಸಂಚಾಲಕ ಜಯರಾಮ್ ಭಂಡಾರಿ, ನಿರ್ದೇಶಕರುಗಳಾದ ರಾಜು ಶೆಟ್ಟಿ ಬೆಂಗಾತ್ಯಾರು, ಪ್ರಕಾಶ್ ಶೆಟ್ಟಿ ನೊಚ್ಚ, ಸಂಜೀವ ಶೆಟ್ಟಿ ಕೆಂಬರ್ಜೆ, ವಿಠ್ಠಲ್ ಶೆಟ್ಟಿ ಕೊಲ್ಲೊಟ್ಟು, ಸಂಜೀವ ಶೆಟ್ಟಿ ಕುಂಟಿನಿ, ಆನಂದ್ ಐಸಿರಿ, ಸಾರಿಕಾ ಶೆಟ್ಟಿ, ಪುರಂದರ ಶೆಟ್ಟಿ ಕಣಿಯೂರು, ಮೀನಾಕ್ಷಿ ಶೆಟ್ಟಿ, ನಾರಾಯಣ ಶೆಟ್ಟಿ,
ಮಹಿಳಾ ವಿಭಾಗದ ಅಧ್ಯಕ್ಷೆ ಜಯಲಕ್ಷ್ಮಿ ಎನ್ ಸಾಮಾನಿ, ಕಾರ್ಯದರ್ಶಿ ಶ್ರೇಯ ಶೆಟ್ಟಿ, ಕೋಶಾಧಿಕಾರಿ ರಕ್ಷಿತಾ ಶೆಟ್ಟಿ, ಸಂಚಾಲಕಿ ಶೋಭಾ ವಿ ಶೆಟ್ಟಿ, ಜತೆ ಕಾರ್ಯದರ್ಶಿ ಶುಭಶ್ರೀ ಶೆಟ್ಟಿ, ನಿರ್ದೇಶಕರುಗಳಾದ ಸ್ವಾತಿ ಶೆಟ್ಟಿ, ವಿಂದ್ಯಾ ಶೆಟ್ಟಿ, ಶುಭ ರವಿ ಶೆಟ್ಟಿ, ರಂಜಿತಾ ಶೆಟ್ಟಿ, ಪವಿತ್ರ ಶೆಟ್ಟಿ, ಸಂಸ್ಕೃತಿ ರೈ ಉಪಸ್ಥಿತರಿದ್ದರು.