Site icon Suddi Belthangady

ಕುತ್ಲೂರು: ಕಳ್ಳತನ ಪ್ರಕರಣ: ತನಿಖೆಗೆ ಉಸ್ತುವಾರಿ ಸಚಿವರಿಗೆ ಮನವಿ

ಕುತ್ಲೂರು: ಅ.2ರಿಂದ ಅ. 6ರ ನಡುವೆ, ಗ್ರಾಮದ ಶ್ರೀ ಅವಿನಾಶ್ ಅವರ ವಾಸವಿದ್ದ “ಶ್ರೀ ಅನಘ” ಎಂಬ ಮನೆಗೆ, ಅವರು ಮನೆಯಲ್ಲಿ ಇಲ್ಲದ ಸಮಯದಲ್ಲಿ, ಬೀಗ ಮುರಿದು ಒಳಹೊಕ್ಕ ಕಳ್ಳರು ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದರೋಡೆ ಮಾಡಿರುತ್ತಾರೆ. ಈ ಪ್ರಕರಣವು ನಮ್ಮ ವೇಣೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುತ್ತದೆ. ಈ ಪ್ರಕರಣವನ್ನು ಕೈಗೆತ್ತಿಕೊಂಡ ಪೊಲೀಸ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಯವರು, ಈ ಪ್ರಕರಣವನ್ನು ಭೇದಿಸುವ ಸಲುವಾಗಿ ಉತ್ತಮವಾಗಿ ಸ್ಪಂದಿಸಿರುತ್ತಾರೆ. ವಾರೀಸುದಾರರಿಗೆ ಅಪಾರ ನಷ್ಟವಾಯಿತಲ್ಲದೆ, ನಾವು ಗ್ರಾಮಸ್ಥರು ಈ ಪ್ರಕರಣದಿಂದ ತುಂಬಾ ಭಯಭೀತರಾಗಿರುತ್ತೇವೆ. ಅತ್ಯುತ್ತಮ ಸಾಹಸಿಕ ಪ್ರವಾಸೋದ್ಯಮ ಹಳ್ಳಿ ಎಂದು ರಾಷ್ಟ್ರಮಟ್ಟದಲ್ಲಿ ಗುರುತಿಸಲ್ಪಟ್ಟ ನಮ್ಮ ಊರಿನ ಹೆಸರಿಗೆ ಇದೊಂದು ಮಸಿ ಬಳಿದಂತಾಗಿರುತ್ತದೆ. ಇತರ ಕಳ್ಳತನ ಪ್ರಕರಣಗಳೂ ಈ ಊರಿನಲ್ಲಿ ನಡೆಯುತ್ತಿದ್ದು, ನಾವು ಗ್ರಾಮಸ್ಥರು ಭಯಮುಕ್ತವಾಗಿ ಬದುಕು ನಡೆಸಲು, ಇಂತಹ ದರೋಡೆಕೋರರನ್ನು ಮಟ್ಟ ಹಾಕಲೇಬೇಕಾಗಿರುತ್ತದೆ. ಗೌರವಾನ್ವಿತ ‘ಕರ್ನಾಟಕ ಪೊಲೀಸ್ ಇಲಾಖೆ’ ಯ ಅತೀ ನಂಬುಗೆಯ ಗ್ರಾಮಸ್ಥರಾದ ನಾವೆಲ್ಲಾ, ಈ ಪ್ರಕರಣದ ತಾರ್ಕಿಕ ಅಂತ್ಯದ ನಿರೀಕ್ಷೆಯಲ್ಲಿರುತ್ತೇವೆ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಕ್ಷಿಪುಗತಿಯಲ್ಲಿ ಈ ಸಮಾಜದ್ರೋಹಿ ಶಕ್ತಿಗಳ ಬಂಧನವಾಗಿ, ತಕ್ಕ ಶಿಕ್ಷೆಯಾಗುವಂತೆ ಮಾಡಿಸುವಲ್ಲಿ “ಪೊಲೀಸ್ ವಿಶೇಷ ತನಿಖಾ ದಳವನ್ನು’ ನೇಮಿಸಿ, ಭಯಮುಕ್ತ ಸಮಾಜವನ್ನು ನಿರ್ಮಿಸಬೇಕೆಂದು ಗ್ರಾಮಸ್ಥರು

Exit mobile version