Site icon Suddi Belthangady

ಬೆಳ್ತಂಗಡಿ: ವರ್ತಕರ ಸಂಘದಿಂದ ಉಸ್ತುವಾರಿ ಸಚಿವರಿಗೆ ಮನವಿ

ಬೆಳ್ತಂಗಡಿ: ವರ್ತಕರ ಸಂಘದಿಂದ ಬೆಳ್ತಂಗಡಿ ಪೇಟೆಯಲ್ಲಿ ಸರ್ವಿಸ್ ರಸ್ತೆ ರದ್ದು ಮಾಡಿ, ಇದ್ದ ರಸ್ತೆಯನ್ನು ಪುಂಜಾಲಕಟ್ಟೆ – ಬಿ.ಸಿ.ರೋಡ್ ಮಾದರಿಯಲ್ಲಿ ಅಗಲೀಕರಣ ಮಾಡಲು ಪೇಟೆಯ ಎಲ್ಲಾ ವರ್ತಕರು ಸೇರಿ ಸಂತೆಕಟ್ಟೆಯ ಅಯ್ಯಪ್ಪ ಗುಡಿ ಹತ್ತಿರ ಉಸ್ತುವಾರಿ ಸಚಿವ ಗುಂಡೂರಾವ್ ರಿಗೆ ಮನವಿಯನ್ನು ಸಲ್ಲಿಸಿದರು.

ಕೆ. ಪಿ. ಸಿ. ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಉಪಸ್ಥಿತರಿದ್ದರು. ಸರ್ವಿಸ್ ರಸ್ತೆಯಿಂದ ಪೇಟೆಯ ಎಲ್ಲಾ ವರ್ತಕರಿಗೆ ಕಷ್ಟ ನಷ್ಟವನ್ನು ಅನುಭವಿಸುವ ಹಾಗೂ ಹೆಚ್ಚಿನ ರಸ್ತೆ ಅಪಘಾತಗಳು ಆಗುವ ಸಾಧ್ಯತೆಗಳು ತುಂಬಾ ಹೆಚ್ಚಾಗಲಿವೆ. ವರ್ತಕರ ಸಂಘದ ಅಧ್ಯಕ್ಷ ರೋನಾಲ್ಡ್ ಲೋಬೊ, ಜತೆ ಕಾರ್ಯದರ್ಶಿ ಯಶವಂತ್ ಪಟವರ್ಧನ್, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ವರ್ತಕರಾದ ಜಗದೀಶ್ ಡಿ., ಶರ್ಮಿಳಾ ಮೋರಸ್, ಅಶೋಕ್ ಶೆಟ್ಟಿ, ವಿನ್ಸಂಟ್ ಡಿಸೋಜಾ, ವಿಲ್ಸನ್ ಗೊನ್ಸಲ್ವಿಸ್, ಸುಶೀಲ ಹೆಗ್ಡೆ, ವಿಶ್ವನಾಥ್ ಶೆಟ್ಟಿ, ಜೂಡ್ ಲೋಬೊ, ಎಮ್. ಎಚ್. ಅಬೂಬಕರ್, ಯಶವಂತ್ ಬಾಳಿಗ ಲೀಡ್ವಿನ್ ಟೆಲ್ಲಿಸ್, ಜೋಸೆಫ್ ಟೆಲ್ಲಿಸ್, ಮಂಜುನಾಥ್ ಪೈ, ಪಿ.ಕೆ. ಅಪ್ಸರ್, ಗ್ರೇಸಿ ಲೋಬೊ, ಮೊಂತಿನ್ ಕ್ರ್ಯಾಸ್ತಾ, ಪ್ರವೀಣ್ ಹಳ್ಳಿಮನೆ, ದಿನೇಶ್ ಹಾಗೂ ಹಲವಾರು ವರ್ತಕರು ಉಪಸ್ಥಿತರಿದ್ದರು.

Exit mobile version