ಕಾರ್ಕಳ ಕುದುರೆಮುಖ ವನ್ಯಜೀವಿ ವಿಭಾಗದ 71ನೇ ವರ್ಷದ “ವನ್ಯ ಜೀವಿ ಸಪ್ತಾಹ “ದ ಅಂಗವಾಗಿ ನಡೆದ ಭಾಷಣ ಸ್ಪರ್ಧೆಯಲ್ಲಿ ಬೆಳ್ತಂಗಡಿ ವಲಯ ಮಟ್ಟದಲ್ಲಿ ಪ್ರಥಮ ಹಾಗೂ ಕಾರ್ಕಳದಲ್ಲಿ ಅ. 4ರಂದು ನಡೆದ ವಿಭಾಗ ಮಟ್ಟದಲ್ಲಿ ನಡೆದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಶಿರ್ಲಾಲು ಗ್ರಾಮದ ಕೋರೆಯೋರು ಎಂಬಲ್ಲಿಯ ಜಯ ನಾಯ್ಕ್ ಹಾಗೂ ಮಂಜುಳ ದಂಪತಿಯ ಪುತ್ರಿ ಶ್ರೇಯಾ ಅವರು ತಾಲೂಕಿಗೆ ಕೀರ್ತಿ ತಂದಿದ್ದಾರೆ. ಪ್ರಸ್ತುತ ಅವರು ಅಳದಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಷಯದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
71ನೇ ವರ್ಷದ “ವನ್ಯ ಜೀವಿ ಸಪ್ತಾಹ ” ಪ್ರಯುಕ್ತ ಭಾಷಣ ಸ್ಪರ್ಧೆ: ಶ್ರೇಯಾ ಪ್ರಥಮ
