ಉಜಿರೆ: ಶಾಂತಿನಗರ ನಿವಾಸಿ ಕಾಫಿ ಬೋರ್ಡ್ ನಿವೃತ್ತ ಅಧಿಕಾರಿ ಸೀತಾರಾಮ ಪುತ್ರಾಯ ( 77ವ ) ಅವರು ಅಲ್ಪಕಾಲದ ಅನಾರೋಗ್ಯದಿಂದ ಅ. 9ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ ಲತಾ ಸೀತಾರಾಮ ಪುತ್ರಾಯ, ಮಕ್ಕಳಾದ ಹರ್ಷ ಎಸ್.ಪಿ. ಮತ್ತು ದಿವ್ಯ ಸುಧೀರ್ ಅವರನ್ನು ಅಗಲಿದ್ದಾರೆ. ತುಳು ಶಿವಳ್ಳಿ ಸಂಘಟನೆಯಲ್ಲಿ ಸಕ್ರಿಯರಾಗಿ ಕಾರ್ಯನಿರ್ವಹಿಸಿದ್ದರು. ಕಾಫಿ ಬೋರ್ಡ್ ನಲ್ಲಿ ಸೂಪರ್ ವೈಸರ್, ಫೀಲ್ಡ್ ಆಫೀಸರ್ ಅಧಿಕಾರಿಯಾಗಿ ಚಿಕ್ಕಮಗಳೂರು, ಬೇಲೂರು, ಹಾಸನ, ಸಕಲೇಶಪುರಗಳಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದರು.
ಉಜಿರೆ: ಕಾಫಿ ಬೋರ್ಡ್ ನಿವೃತ್ತ ಅಧಿಕಾರಿ ಸೀತಾರಾಮ ಪುತ್ರಾಯ ನಿಧನ
