Site icon Suddi Belthangady

ಬೆಳ್ತಂಗಡಿ: ಪೌಷ್ಠಿಕ ಆಹಾರ ಮಾಹಿತಿ ಕಾರ್ಯಕ್ರಮ

ಬೆಳ್ತಂಗಡಿ: ವಿಮುಕ್ತಿ ಸ್ವ ಸಹಾಯ ಸಂಘಗಳ ಟ್ರಸ್ಟ್ ನಿಂದ ತಾಲೂಕಿನ ಬಜಿರೆ, ಬದ್ಧಾರು, ಕಳೆಂಜ ಮತ್ತು ಕಾಯರ್ತಡ್ಕ ಘಟಕಗಳಲ್ಲಿ ಪೌಷ್ಠಿಕ ಆಹಾರ ಮತ್ತು ಆರೋಗ್ಯ ಮಾಹಿತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಪ್ರಾಥಮಿಕ ಆರೋಗ್ಯ ಕಾರ್ಯಕರ್ತೆಯರಾದ ರೇಖಾ ಮತ್ತು ಸುಜಾತಾ ಅವರು ಉತ್ತಮ ಆರೋಗ್ಯ ಕಾಪಾಡುವಲ್ಲಿ ಪೌಷ್ಠಿಕ ಆಹಾರದ ಮಹತ್ವವನ್ನು ವಿವರಿಸಿದರು.

ಮಹಿಳೆಯರು ತಯಾರಿಸಿ ತಂದಿದ್ದ ವಿಧ ವಿಧದ ಆಹಾರ ಪದಾರ್ಥಗಳನ್ನು ಪ್ರದರ್ಶಿಸಿ ವಿವರಣೆ ನೀಡಲಾಯಿತು. ಎಲ್ಲರೂ ಜೊತೆಗೂಡಿ ಎಲ್ಲಾ ಪೌಷ್ಠಿಕ ಆಹಾರದ ಸವಿಯನ್ನುಂಡರು. ಆಯಾ ಘಟಕದ ಸದಸ್ಯರು ಕಾರ್ಯಕ್ರಮವನ್ನು ಆಯೋಜಿಸಿ ನಿರ್ವಹಿಸಿದರು. ಸಂಸ್ಥೆಯಿಂದ ಸವಿತಾ, ರೋಹಿಣಿ ಹಾಗೂ ಜಲಜಾಕ್ಷಿ ಅವರು ಉಪಸ್ಥಿತರಿದ್ದರು.

Exit mobile version