ಬೆಳ್ತಂಗಡಿ: ಟಿಕೆಟ್ ಹಣ ಕೊಟ್ಟಿಲ್ಲ ಅಂತ ಲೇಡಿ ಕಂಡಕ್ಟರ್, ಕೊಟ್ಟಿದ್ದೇನೆ ಅಂತ ಪ್ರಯಾಣಿಕ, ಈ ವಿಷಯದಲ್ಲಿ ಗಲಾಟೆ ತಾರಕಕ್ಕೇರಿ, ಪ್ರಯಾಣಿಕನ ಮೇಲೆ ಬಸ್ ನಲ್ಲೇ ಕಂಡಕ್ಟರ್ ಹಲ್ಲೆ ನಡೆಸಿರುವ ಘಟನೆ ಬೆಳ್ತಂಗಡಿಯಲ್ಲಿ ಅ.10ರಂದು ನಡೆದಿದೆ.
ಮೂಡಿಗೆರೆಯಿಂದ ಮಂಗಳೂರಿಗೆ ತೆರಳುತ್ತಿದ್ದ ಬಸ್ ಗೆ ಉಜಿರೆಯಲ್ಲಿ ಹತ್ತಿದ ಪ್ರಯಾಣಿಕ ಟಿಕೆಟ್ ಹಣ ಕೊಟ್ಟಿದ್ದೇನೆ ಅಂತ ವಾದಿಸುತ್ತಿದ್ದರೆ, ಲೇಡಿ ಕಂಡಕ್ಟರ್ ಹಣ ಕೊಟ್ಟಿಲ್ಲ ಅಂತ ವಾದಿಸುತ್ತಿದ್ದರು. ಬಸ್ ನಲ್ಲಿದ್ದ ಪ್ರಯಾಣಿಕರು ಆತ ಹಣ ಕೊಟ್ಟಿದ್ದಾನೆ ಅಂತ ಸ್ಥಳದಲ್ಲಿ ತಿಳಿಸಿದರು. ಬಸ್ ನಲ್ಲಿದ್ದ ಪ್ರಯಾಣಿಕರು ಕಂಗಾಲಾದರು. ಈ ವೇಳೆ ಬೆಳ್ತಂಗಡಿ ಪೊಲೀಸರು ಮದ್ಯ ಪ್ರವೇಶಿಸಿ, ಕಂಡಕ್ಟರ್ ಮತ್ತು ಪ್ರಯಾಣಿಕನನ್ನು ಬೆಳ್ತಂಗಡಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು. ಬಸ್ ನಲ್ಲಿದ್ದ ಪ್ರಯಾಣಿಕರಿಗೆ ಬೆಳ್ತಂಗಡಿ ಟಿಸಿ ಬದಲಿ ವ್ಯವಸ್ಥೆ ಮಾಡಿದರು.
ಬೆಳ್ತಂಗಡಿಯಲ್ಲೇ ನಿಂತ ಬಸ್ ಗೆ ಬದಲಿ ವ್ಯವಸ್ಥೆ ಮಾಡಿ ಕಳುಹಿಸಲಾಗಿದೆ. ಘಟನೆಯ ವೀಡಿಯೋವನ್ನು ಮಾಡುತ್ತಿದ್ದ ಮಾಧ್ಯಮದವರ ಮೊಬೈಲ್ ಕೂಡ ಲೇಡಿ ಕಂಡಕ್ಟರ್ ಕಸಿದುಕೊಂಡರು.