Site icon Suddi Belthangady

ಅನುಗ್ರಹ ಎಲ್.ಕೆ.ಜಿ ವಿದ್ಯಾರ್ಥಿಗಳಿಂದ ಸೃಜನಾತ್ಮಕ ಚಟುವಟಿಕೆ

ಉಜಿರೆ: ಅನುಗ್ರಹ ಇಂಗ್ಲಿಷ್ ಮೀಡಿಯಂ ಶಾಲೆಯ ಎಲ್.ಕೆ.ಜಿ ವಿದ್ಯಾರ್ಥಿಗಳಿಗಾಗಿ ಅ. 9ರಂದು ಬೆಳಿಗ್ಗೆ 10 ಗಂಟೆಗೆ ಸೃಜನಾತ್ಮಕ ಚಟುವಟಿಕೆ ನಡೆಸಲಾಯಿತು. ಈ ಚಟುವಟಿಕೆಯಲ್ಲಿ ಮಕ್ಕಳು ಕ್ಲೇ/ಡೋ ಕಲೆಗಳಿಂದ ಹಣ್ಣು ಮತ್ತು ತರಕಾರಿಗಳ ಬಣ್ಣ ಮುದ್ರಣ ಮಾಡಿದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಶಿಕ್ಷಕರು ಮಕ್ಕಳಿಗೆ ಹಣ್ಣುಗಳು ಮತ್ತು ತರಕಾರಿಗಳ ಪರಿಚಯ ನೀಡಿ, ಅವುಗಳ ಪೌಷ್ಟಿಕ ಮಹತ್ವವನ್ನು ವಿವರಿಸಿದರು. ಮಕ್ಕಳು ಚಟುವಟಿಕೆಯಲ್ಲಿ ಉತ್ಸಾಹದಿಂದ ಭಾಗವಹಿಸಿ, ತಾವು ತಯಾರಿಸಿದ ಹಣ್ಣು ಹಾಗೂ ತರಕಾರಿಗಳನ್ನು ಆತ್ಮವಿಶ್ವಾಸದಿಂದ ವಿವರಣೆ ಮಾಡಿದರು.

ಪ್ರಾಂಶುಪಾಲರು ಕಾರ್ಯಕ್ರಮದಲ್ಲಿ ಹಾಜರಾಗಿ, ಮಕ್ಕಳ ಸೃಜನಶೀಲತೆಯನ್ನು ಮೆಚ್ಚಿದರು ಹಾಗೂ ಶಿಕ್ಷಕರು ಮತ್ತು ಪೋಷಕರು ನೀಡಿದ ಸಹಕಾರಕ್ಕೆ ಅಭಿನಂದನೆ ಸಲ್ಲಿಸಿದರು. ಈ ಚಟುವಟಿಕೆ ಅತ್ಯಂತ ಯಶಸ್ವಿಯಾಗಿ ನೆರವೇರಿತು ಮತ್ತು ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಹಾಗೂ ಸೃಜನಾತ್ಮಕತೆ ಹೆಚ್ಚಿಸಲು ಸಹಾಯವಾಯಿತು.

Exit mobile version