ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಳೆಂಜ, ಕಾಯರ್ತಡ್ಕ ಗ್ರಾಮದ ಸೌಜನ್ಯ ಸಂಘದ ಸದಸ್ಯೆ ರತ್ನ ಅವರು ಬ್ರೈನ್ ಟ್ಯೂಮರ್ ಕಾಯಿಲೆಯಿಂದ ಬಳಲುತ್ತಿದ್ದು ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಕೊಮೊಡೋ ವೀಲ್ ಚೆಯರನ್ನು ಒದಗಿಸಲಾಯಿತು.
ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಗೋರಕ್ಷ ಪ್ರಮುಖ್ ಗಣೇಶ್ ಕಳೆಂಜ, ಬೆಳ್ತಂಗಡಿ ಪ್ರಖಂಡ ತತ್ಸಂಗ ಪ್ರಮುಖ್ ಅಶೋಕ್, ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಉಮೇಶ್ ಕಳೆಂಜ ಹಾಗೂ ವಲಯ ಮೇಲ್ವಿಚಾರಕ ರವೀಂದ್ರ ಬಿ., ಸೇವಾಪ್ರತಿನಿಧಿ ಜನಾರ್ದನ ಅವರು ಉಪಸ್ಥಿತರಿದ್ದರು.