
ನಡ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಿತಿಯ ನೇತೃತ್ವದಲ್ಲಿ ಉಜಿರೆ ಬೆನಕ ಹೆಲ್ತ್ ಸೆಂಟರ್ ಮತ್ತು ಚಾರಿಟೇಬಲ್ ಟ್ರಸ್ಟ್ ನಿಂದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಅ. 12ರಂದು ನಡ ಶಾಲಾ ವಠಾರದಲ್ಲಿ ನಡೆಯಲಿದೆ.
ಶಿಬಿರದಲ್ಲಿ ಸಿಗುವ ಸೌಲಭ್ಯಗಳು: ಹೃದಯ ತಪಾಸಣೆ (ಇ.ಸಿ.ಜಿ.),ಮಧುಮೇಹ ತಪಾಸಣೆ, ರಕ್ತದೊತ್ತಡ (ಬಿ.ಪಿ.) ತಪಾಸಣೆ, ಕಣ್ಣು ತಪಾಸಣೆ, ಹಲ್ಲು ಕೀಳುವಿಕೆ, ಜನರಲ್ ಮೆಡಿಸಿನ್, ಮಕ್ಕಳ ತಪಾಸಣೆ, ಸ್ತ್ರೀರೋಗ ತಪಾಸಣೆ ಆಯುರ್ವೇದ ಸೌಲಭ್ಯ.
ಶಿಬಿರದಲ್ಲಿ ಪಾಲ್ಗೊಳ್ಳುವ ವೈದ್ಯರು: ಶಸ್ತ್ರ ಚಿಕಿತ್ಸಾ ತಜ್ಞರು – ಡಾ| ವಿಜೇತ್ ರೈ, MBBS, MS, FIAGES, FACRSIFLHO, ತುರ್ತು ಚಿಕಿತ್ಸಾ ತಜ್ಞರು – ಡಾ| ಆದಿತ್ಯ ರಾವ್, MBBS, DNB (ಫಿಸಿಶಿಯನ್), ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞರು- ಡಾ| ಅಂಕಿತ ಜಿ. ಭಟ್, MBBS, MS, DNB, OBG, FMIS, ಎಲುಬು-ಕೀಲು ತಜ್ಞರು- ಡಾಕ್ಟರ್ ರೋಹಿತ್ ಜಿ. ಭಟ್ MBBS, MS(ORTHO) Hand& Microsurgery, ಮಕ್ಕಳ ತಜ್ಞರು- ಡಾ| ಸೂರಜ್ ಶೆಟ್ಟಿ, MBBS, MS, ಸ್ತ್ರೀ ರೋಗ ತಜ್ಞರು (ಆಯುರ್ವೇದ)- ಡಾ| ಕವಿತಾ ಪ್ರದೀಪ್, BNYA, MS (AYU), ಪಂಚಕರ್ಮ ಚಿಕಿತ್ಸಾ ತಜ್ಞರು- ಡಾ| ವಿದ್ಯಾ ಪಡ್ಡೆಟ್ನಾಯ, BNYS, MD (AYU).
ರಿಯಾಯಿತಿ ದರದಲ್ಲಿ ಕಣ್ಣಿನ ಶಸ್ತ್ರ ಚಿಕಿತ್ಸೆ, ಅಗತ್ಯವುಳ್ಳವರಿಗೆ ರೂ. 1200 ದರದ ಕನ್ನಡಕ ಕೇವಲ ರೂ. 500ಗೆ ಲಭ್ಯ, ಸಾರ್ವಜನಿಕರು ಈ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿ ಶಾಲಾ ಆಡಳಿತ ಮಂಡಳಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.