Site icon Suddi Belthangady

ನೆರಿಯ: ಬೆಂಕಿ ತಗುಲಿ ಹಾನಿಯಾದ ಮನೆಗೆ ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗರ ಸಂಘ ಹಾಗೂ ವಾಣಿ ಶಿಕ್ಷಣ ಸಂಸ್ಥೆಯಿಂದ ಭೇಟಿ

ನೆರಿಯ: ಗ್ರಾಮದ ಹರೀಶ್ ವಿ. ಅವರ ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸಂಪೂರ್ಣವಾಗಿ ಹಾನಿಗೊಂಡ ಹಿನ್ನೆಲೆಯಲ್ಲಿ ಅ.8ರಂದು ಗೌಡರ ಯಾನೆ ಒಕ್ಕಲಿಗರ ಸಂಘ, ಯುವ ವೇದಿಕೆ, ಮಹಿಳಾ ವೇದಿಕೆ ಹಾಗೂ ವಾಣಿ ಶಿಕ್ಷಣ ಸಂಸ್ಥೆಯಿಂದ ಭೇಟಿ ನೀಡಲಾಯಿತು.

ಈ ವೇಳೆ ಯುವ ವೇದಿಕೆಯಿಂದ ಮನೆಗೆ ಮುಂದಿನ 2 ತಿಂಗಳಿಗೆ ಬೇಕಾದ ದಿನಸಿ ಸಾಮಾಗ್ರಿ, ಅಕ್ಕಿ ನೀಡಲಾಯಿತು. ಹಾಗೂ ಮನೆ ನಿರ್ಮಾಣಕ್ಕೆ ಆರ್ಥಿಕವಾಗಿ ಸಹಾಯ ನೀಡುವ ಭರವಸೆ ನೀಡಿದರು.

ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ವಾಣಿ ಶಿಕ್ಷಣ ಸಂಸ್ಥೆ ಪ್ರಾಂಶುಪಾಲ ವಿಷ್ಣು ಪ್ರಕಾಶ್ ಎಂ., ಮುಖ್ಯೋಪಾಧ್ಯಾಯ ಲಕ್ಷ್ಮಿ ನಾರಾಯಣ ಕೆ., ಶಿಕ್ಷಕರು ಹಾಗೂ ಸಂಘದ ಉಪಾಧ್ಯಕ್ಷರಾದ ನಾರಾಯಣ ಗೌಡ ದೇವಸ್ಯ, ಧರ್ಣಪ್ಪ ಗೌಡ, ಕೋಶಾಧಿಕಾರಿ ಯುವರಾಜ್‌ ಗೌಡ ಅನಾರು, ಜತೆ ಕಾರ್ಯದರ್ಶಿ ಶ್ರೀನಾಥ್ ಕೆ. ಎಂ., ಯುವ ವೇದಿಕೆ ಅಧ್ಯಕ್ಷ ಚಂದ್ರ ಕಾಂತ್ ನಿಡ್ಡಾಜೆ, ಕಾರ್ಯದರ್ಶಿ ಸುರೇಶ್ ಗೌಡ, ನವೀನ್ ಗೌಡ, ನಿತಿನ್, ಪ್ರದೀಪ್ ಗೌಡ, ತಿಕ್ಷಿತ್, ಭರತ್, ದಿನೇಶ್, ಪ್ರಸಾದ್ ಹಾಗೂ ಮಹಿಳಾ ವೇದಿಕೆಯ ಸದಸ್ಯರು ಉಪಸ್ಥಿತರಿದ್ದರು.

Exit mobile version