Site icon Suddi Belthangady

ಉಜಿರೆ: ಶ್ರೀ ಗಣೇಶ್ ಮಲ್ಟಿ ಬ್ರಾಂಡ್ ಟಯರ್ & ಗ್ಯಾರೇಜ್ ಶುಭಾರಂಭ

ಉಜಿರೆ: ಎಸ್.ಡಿ.ಎಂ ಆಸ್ಪತ್ರೆಯ ಎದುರು ನೂತನವಾಗಿ ಪ್ರಾರಂಭಗೊಂಡ ಗಣೇಶ್ ಮಲ್ಟಿ ಬ್ರಾಂಡ್ ಟಯರ್ & ಗ್ಯಾರೇಜ್ ಶುಭಾರಂಭ ಅ.1ರಂದು ನಡೆಯಿತು.

ಉಜಿರೆ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ ಅನುವಂಶೀಯ ಆಡಳಿತ ಮೋಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಅವರು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಶುಭ ಕೋರಿದರು.

ಉಜಿರೆ ಎಸ್‌.ಎಲ್‌.ವಿ ನವರತ್ನ, ಉಜಿರೆ ಗ್ರಾ.ಪಂ ಉಪಾಧ್ಯಕ್ಷ ರವಿ ಕುಮಾರ್ ಬರಮೇಲು, ಇಂಜಿನಿಯರ್ ಗಣೇಶ್
ಬೆನಕ, ಉದ್ಯಮಿಗಳಾದ ರವಿ ಚಕ್ಕಿತ್ತಾಯ, ಅಜಯ್ ಉದಯ ಚಿಕನ್, ಪ್ರಕಾಶ್ ಅಪ್ರಮೆಯ, ರಾಮಣ್ಣ ಗೌಡ ಉಜಿರೆ ಹಾಗೂ ಇತರರು ಉಪಸ್ಥಿತರಿದ್ದು ಶುಭಾಶಯ ತಿಳಿಸಿದರು.

ಆಗಮಿಸಿದ ಅತಿಥಿ ಗಣ್ಯರನ್ನು ಸಂಸ್ಥೆಯ ಮಾಲಕರಾದ ಪ್ರವೀಣ್‌- ಜ್ಯೋತಿ ದಂಪತಿ, ಪುತ್ರ ವಿಶ್ರುತ್ ಹಾಗೂ ಸಂಜೀವ ಆಚಾರ್ಯ ಅವರು ಸ್ವಾಗತಿಸಿ, ಸತ್ಕರಿಸಿದರು.

ರವೀಂದ್ರ ಶೆಟ್ಟಿ ಬಳಂಜ ಸುರುಭಿ ಉಜಿರೆ ವಂದಿಸಿದರು.

Exit mobile version