Site icon Suddi Belthangady

ಗೇರುಕಟ್ಟೆ: ಅರ್ಕುಳ ಸುಬ್ರಾಯ ಆಚಾರ್ಯ ಪ್ರತಿಷ್ಠಾನದಿಂದ ತೀರ್ಥಹಳ್ಳಿ ಗೋಪಾಲಾಚಾರ್ಯರಿಗೆ ಅರ್ಕುಳ ಪ್ರಶಸ್ತಿ ಪ್ರದಾನ

ಬೆಳ್ತಂಗಡಿ: ಶ್ರೀ ಜಗದ್ಗುರು ಅಯ್ಯ ಸ್ವಾಮಿ ಮಠ ಆಲoಗಾರು ಮೂಡಬಿದಿರೆ ಪುನರ್ ನಿರ್ಮಾಣ ಜೀರ್ಣೋದ್ಧಾರದ ಪ್ರಯುಕ್ತ ನಡೆದ ಶ್ರೀ ಗುರು ಮತ್ತು ವಿಶ್ವಕರ್ಮ ಯಜ್ಞದ ಶುಭಾವಸರದಲ್ಲಿ ಅಲಂಗಾರಿನ ಪಾಲ್ಕೆ ಬಾಬುರಾಯ ಆಚಾರ್ಯ ವೇದಿಕೆಯಲ್ಲಿ ಗೇರುಕಟ್ಟೆಯ ಅರ್ಕುಳ ಸುಬ್ರಾಯ ಆಚಾರ್ಯ ಪ್ರತಿಷ್ಠಾನದಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಡಗುತಿಟ್ಟಿನ ಪ್ರಸಿದ್ಧ ಕಲಾವಿದ ತೀರ್ಥಹಳ್ಳಿ ಗೋಪಾಲ ಆಚಾರ್ಯ ಇವರಿಗೆ ಅರ್ಕುಳ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀಮಠದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಎನ್. ಕೇಶವತಂತ್ರಿ ಅಂಕಸಾಲೆ ನಿಧಿ ಸಹಿತ ಪ್ರಶಸ್ತಿ ಪ್ರದಾನ ಮಾಡಿ ಅರ್ಕುಳ ಸುಬ್ರಾಯಾಚಾರ್ಯರ ಸ್ಮರಣೆ ನಿರಂತರವಾಗಿ ನಡೆದು ತಾಳಮದ್ದಳೆ ಮತ್ತು ಕಲಾ ಕ್ಷೇತ್ರಕ್ಕೆ ಅವರ ನೀಡಿದ ಕೊಡುಗೆ ಮಾರ್ಗದರ್ಶಕವಾಗಲಿಯೆಂದರು.

ಅರ್ಕುಳ ಪ್ರತಿಷ್ಠಾನದ ಸಂಚಾಲಕ ದಿವಾಕರ ಆಚಾರ್ಯ ಗೇರುಕಟ್ಟೆ ಸುಬ್ರಾಯ ಆಚಾರ್ಯರ ಸಂಸ್ಮರಣೆಯನ್ನು ಮಾಡಿ ಮೊದಲು ಮಲ್ಪೆ ವಾಸುದೇವ ಸಾಮಗ, ಯಕ್ಷಪ್ರಭಾ ಪತ್ರಿಕೆಯ ಸಂಪಾದಕ, ಭಾಗವತ ಕುಬನೂರು ಶ್ರೀಧರ ರಾವ್, ಯಕ್ಷಗಾನ ಸಂಘಟಕ ಮಾಣಿ ರಾಮಚಂದ್ರ ಆಚಾರ್ಯ, ಹರಿದಾಸ ಅಳಿಕೆ ಸಂಜೀವ ಶೆಟ್ಟಿಯವರಿಗೆ ಅರ್ಕುಳ ಪ್ರಶಸ್ತಿ ನೀಡಿ ಗೌರವಿಸಲಾಗಿದೆಯೆಂದರು.

ಅರ್ಕುಳ ಪ್ರಶಸ್ತಿ ಸ್ವೀಕರಿಸಿದ ತೀರ್ಥಹಳ್ಳಿ ಗೋಪಾಲಾಚಾರ್ಯ ಕಲೆ ಮತ್ತು ಕಲಾಭಿಮಾನಿಗಳ ಪ್ರೀತಿಯ ಸೆಳೆತ ಮತ್ತು ಮಹಾನ್ ಕಲಾವಿದನ ನೆನಪಿನ ಪ್ರಶಸ್ತಿಪಡೆದಿರುವುದು ನನ್ನ ಭಾಗ್ಯವೆಂದು ತಿಳಿಸಿದರು.

ರಾಜೇಶ ಪುರೋಹಿತ್ ಮೂಡಬಿದಿರೆ, ಪ್ರತಿಷ್ಠಾನದ ಸದಸ್ಯರಾದ ಭಾರತಿ ಎಂಎಲ್, ವಾಣಿ ಆಚಾರ್ಯ, ಸುಬ್ಬರಾಯ ಆಚಾರ್ಯರ ಮೊಮ್ಮಗ ಅರುಣ್ ಆಚಾರ್ಯ ಕದ್ರಿ ಕಂಬ್ಲ,ಹರೀಶ್ ಆಚಾರ್ಯ ಗೇರುಕಟ್ಟೆ, ರಂಜಿತ್ ಆಚಾರ್ಯಮೂಡಬಿದಿರೆ,ಸತೀಶ್ ಆಚಾರ್ಯ ಪೆರ್ಮುದೆ, ಕುಂಟಾಡಿ ದಯಾನಂದ ಪೈ,ಪ್ರದೀಪ್ ಹೆಬ್ಬಾರ್ ಚಾರ, ಸದಾನಂದ ಆಚಾರ್ಯ ನೂರಾಲ್ ಬೆಟ್ಟು ಮತ್ತು ಆಲಂಂಗಾರು ಮಠದ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಪುರಂದರ ಪುರೋಹಿತ್ ಮೂಡಬಿದಿರೆ ಪ್ರಶಸ್ತಿಪತ್ರ ವಾಚನ ಮಾಡಿದರು. ದಿನೇಶ್ ಶರ್ಮ ಕೊಯ್ಯೂರು ಕಾರ್ಯಕ್ರಮ ನಿರೂಪಿಸಿದರು.

ಬಳಿಕ ಜರಗಿದ ಕರ್ಮಬಂಧ ತಾಳಮದ್ದಳೆಯಲ್ಲಿ ಭಾಗವತರಾಗಿ ದೇವರಾಜ ಆಚಾರ್ಯ ಐಕಳ ಹಿಮ್ಮೇಳದಲ್ಲಿ ಯೋಗೀಶ ಆಚಾರ್ಯ ಉಳೆಪಾಡಿ,ಅಶೋಕ ಆಚಾರ್ಯ ಉಳೆಪಾಡಿ ಚಕ್ರತಾಳದಲ್ಲಿ ಜಗದೀಶ ಆಚಾರ್ಯ ಬೇಲಾಡಿ ಅರ್ಥದಾರಿಗಳಾಗಿ ವಿದ್ವಾನ್ ಹಿರಣ್ಯ ವೆಂಕಟೇಶ ಭಟ್ (ಶ್ರೀ ಕೃಷ್ಣ ) ಗಣೇಶ ಶೆಟ್ಟಿ ಕನ್ನಡಿಕಟ್ಟೆ (ಭೀಷ್ಮ ) ದಿವಾಕರ ಆಚಾರ್ಯ ಗೇರುಕಟ್ಟೆ (ಅರ್ಜುನ ) ದಿನೇಶ ಶರ್ಮ ಕೊಯ್ಯೂರು (ಅಭಿಮನ್ಯು ) ಭಾಗವಹಿಸಿದ್ದರು.

Exit mobile version