Site icon Suddi Belthangady

ಮಡಿಕೇರಿ: ದಸರಾ ಪ್ರಯುಕ್ತ ಮಡಂತ್ಯಾರು ನಿಯತಿ ನೃತ್ಯ ನಿಕೇತನ ಕಲಾಶಾಲೆಯಿಂದ ನೃತ್ಯಾಂಜಲಿ ಕಾರ್ಯಕ್ರಮ

ಮಡಂತ್ಯಾರು: ಮಡಿಕೇರಿ ಗಾಂಧೀಮೈದಾನದಲ್ಲಿ ದಸರಾ ಪ್ರಯುಕ್ತ ಅ. 2ರಂದು ಮಡಂತ್ಯಾರು ನಿಯತಿ ನೃತ್ಯ ನಿಕೇತನ ಕಲಾಶಾಲೆ ಅವರಿಂದ ನೃತ್ಯಾಂಜಲಿ ಕಾರ್ಯಕ್ರಮ ನಡೆಯಿತು. ನಿಯತಿ ನೃತ್ಯ ನಿಕೇತನದ ನಿರ್ದೇಶಕಿ ವಿದುಷಿ ನಿಶಾ ಪ್ರಸಾದ್ ಹಾಗೂ ವಿದ್ಯಾರ್ಥಿನಿಯರಾದ ನಿಯತಿ ಭಟ್, ಭವ್ಯ, ಧನ್ವಿತ, ಧನುಶ್ರೀ, ಸಿಂಚನ, ಶ್ರೀನಿಕ, ಭೂಮಿಕಾ, ಸಮನ್ವಿ, ಸಮೃದ್ಧಿ, ಧಾತ್ರಿ, ಪುಣ್ಯಶ್ರೀ, ವೈಷ್ಣವಿ, ರಿತಿಕಾ, ಹವನ, ರಿತಾ, ಹಂಸಿಕಾ ಮತ್ತು ಪ್ರಣಿತಾ ಭಾಗವಹಿಸಿದ್ದರು. ಸಂಸ್ಥೆಯ ನಿರ್ದೇಶಕ ಪ್ರಸಾದ್ ಎಂ.ಕೆ. ಹಾಗೂ ನಿರೂಪಣೆಯಲ್ಲಿ ಪೋಷಕ ತುಳಸಿದಾಸ್ ಪೈ ಸಹಕರಿಸಿದರು.

Exit mobile version