Site icon Suddi Belthangady

ನೆರಿಯ: ಮನೆಗೆ ಆಕಸ್ಮಿಕ ಬೆಂಕಿ, ಹಾನಿಯಾದ ಕುಟುಂಬಕ್ಕೆ ಕಿರಣ್ ಚಂದ್ರ ಡಿ. ಪುಷ್ಪಗಿರಿ ಅವರಿಂದ ಧನ ಸಹಾಯ

ನೆರಿಯ: ಗಂಡಿಬಾಗಿಲು ನಿವಾಸಿ ಹರೀಶ್ ವಿ. ನೆರಿಯ ಅವರ ಮನೆಯಲ್ಲಿ ಅ.6ರಂದು ರಾತ್ರಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಮನೆ ಸಂಪೂರ್ಣವಾಗಿ ಹಾನಿಯಾಗಿದೆ. ಕಿರಣ್ ಚಂದ್ರ ಡಿ. ಪುಷ್ಪಗಿರಿಯವರ, ಟೀಂ ಪುಷ್ಪಗಿರಿ ತಂಡದ ಸದಸ್ಯರು, ಘಟನಾ ಸ್ಥಳಕ್ಕೆ ತುರ್ತಾಗಿ ಭೇಟಿ ನೀಡಿ, ಕಿರಣ್ ಚಂದ್ರ ಪುಷ್ಪಗಿರಿಯವರ ಸಲಹೆ ಮೇರೆಗೆ ಮನೆ ಪುನರ್ನಿರ್ಮಾಣ ಕಾರ್ಯಕ್ಕೆ 25 ಸಾವಿರ ರೂಪಾಯಿಗಳ ಧನ ಸಹಾಯ ಮಾಡಿದರು. ಹಾಗೂ ದೂರವಾಣಿ ಮೂಲಕ ಮಾತನಾಡಿದ ಕಿರಣ್ ಚಂದ್ರ ಡಿ. ಪುಷ್ಪಗಿರಿಯವರು ಮನೆಯ ದುರಸ್ತಿ ಕಾರ್ಯಕ್ಕೆ ಇನ್ನಷ್ಟು, ಆರ್ಥಿಕವಾಗಿ ಸಹಾಯ ಮಾಡುವುದಾಗಿ ಭರವಸೆಯನ್ನು ನೀಡಿದರು.

ಉಜಿರೆ ಮಹಾಶಕ್ತಿ ಕೇಂದ್ರದ ಮಾಜಿ ಅಧ್ಯಕ್ಷ ಬಾಬು ಗೌಡ ನೆರಿಯ, ತೋಟತ್ತಾಡಿ ಶಕ್ತಿ ಕೇಂದ್ರದ ಅಧ್ಯಕ್ಷ ಓಬಯ್ಯ ಗೌಡ ಚಿಬಿದ್ರೆ, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಪ್ರಮೋದ್ ದಿಡುಪೆ, ಭರತ್ ಹಾಗೂ ಊರಿನ ಹಲವಾರು ಗಣ್ಯರು ಉಪಸ್ಥಿತರಿದ್ದರು.

Exit mobile version